ನೈಬ್ ಹಾಫ್ ಸೆಂಚುರಿ: ಟೀಮ್ ಇಂಡಿಯಾಕ್ಕೆ 172 ರನ್ ಟಾರ್ಗೆಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗುಲ್ಬಾದಿನ್ ನೈಬ್ ಸ್ಫೋಟಕ ಹಾಫ್ ಸೆಂಚುರಿ, ಅಂತಿಮ ಹಂತದಲ್ಲಿ ದಿಟ್ಟ ಹೋರಾಟದಿಂದ ಆಫ್ಘಾನಿಸ್ತಾನ 172 ರನ್ ಸಿಡಿಸಿ ಆಲೌಟ್ ಆಗಿದೆ. ಭಾರತಕ್ಕೆ 172 ರನ್ ಟಾರ್ಗೆಟ್ ನೀಡಲಾಗಿದೆ.

ಇಂದೋರ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಇಳಿದ ಆಫ್ಘಾನಿಸ್ತಾನ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. 9 ಎಸೆತದಲ್ಲಿ 14 ರನ್ ಸಿಡಿಸಿದ ರಹಮಾನುಲ್ಲಾ ಗುರ್ಬಾಜ್ ವಿಕೆಟ್ ಪತನ ಭಾರತಕ್ಕೆ ಮೇಲುಗೈ ತಂದುಕೊಟ್ಟಿತು.

ಅಜ್ಮಾತುಲ್ಹಾ ಒಮರಾಜಿ ಕೇವಲ 2 ರನ್ ಸಿಡಿಸಿ ಔಟಾದರು. ಗುಲ್ಬಾದಿನ್ ನೈಬ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ನೈಬ್ ಕೇವಲ 35 ಎಸೆತದಲ್ಲಿ 57 ರನ್ ಸಿಡಿಸಿ ಔಟಾದರು. ಇತ್ತ ಮೊಹಮ್ಮದ್ ನಬಿ 23 ರನ್ ಸಿಡಿಸಿ ನಿರ್ಗಮಿಸಿದರು. ಒಂದೆಡೆ ರನ್ ಬಂದರೂ ಮತ್ತೊಂದೆಡೆ ವಿಕೆಟ್ ಪತನ ಆಫ್ಘಾನಿಸ್ತಾನ ತಂಡದ ಬೃಹತ್ ಮೊತ್ತಕ್ಕೆ ಕಡಿವಾಣ ಹಾಕಿತು.

ನಜೀಬುಲ್ಹಾ, ಕರೀಮ್ ಜನತ್ ಹಾಗೂ ಮುಜೀಬ್ ಹೋರಾಟದಿಂದ ಆಫ್ಘಾನಿಸ್ತಾನದ ಕೈಹಿಡಿಯಿತು. ನಜೀಬುಲ್ಹಾ 21 ಎಸೆತದಲ್ಲಿ 23 ರನ್ ಸಿಡಿಸಿದರು. ಕರಿಮ್ ಜನತ್ ಕೇವಲ 10 ಎಸೆತದಲ್ಲಿ 20 ರನ್ ಸಿಡಿಸಿದರೆ, ಮುಜೀಬ್ ಕೇವಲ 9 ಎಸೆತದಲ್ಲಿ 21 ರನ್ ಕಾಣಿಕೆ ನೀಡಿದರು. ನೂರ್ ಅಹಮ್ಮದ್, ನವೀನ್ ಉಲ್ ಹಕ್ ಹಾಗೂ ಫಜಲ್ಹಾಕ್ ಫಾರೂಖಿಯಿಂದ ರನ್ ಹರಿದು ಬರಲಿಲ್ಲ. ಅಂತಿಮ ಹಂತದಲ್ಲಿ ಆಫ್ಘಾನಿಸ್ತಾನ 172 ರನ್ ಸಿಡಿಸಿ ಆಲೌಟ್ ಆಯಿತು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!