July 23, 2026
Thursday, July 23, 2026
spot_img

CINE | ಇದು ʼಕಿರಿಕ್ʼ ಅಲ್ಲ, ಕಿಲ್ಲಿಂಗ್ ಅವತಾರ! ರಕ್ತಸಿಕ್ತ ಕತ್ತಿ ಹಿಡಿದು ರಗಡ್ ಆಗಿ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ತೆಲುಗಿನ ಎವರ್‌ಗ್ರೀನ್ ಬ್ಲಾಕ್‌ಬಸ್ಟರ್ ಸಿನಿಮಾ ‘ಅರುಂಧತಿ’ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಅಬ್ಬರಿಸಿದ ಮಾದರಿಯಲ್ಲೇ, ಈಗ ನಟಿ ರಶ್ಮಿಕಾ ಮಂದಣ್ಣ ಕೂಡ ಮಹಿಳಾ ಪ್ರಧಾನ ಆ್ಯಕ್ಷನ್ ಸಿನಿಮಾವೊಂದರ ಮೂಲಕ ಬಾಕ್ಸ್ ಆಫೀಸ್ ಧೂಳೀಪಟ ಮಾಡಲು ಸಜ್ಜಾಗುತ್ತಿದ್ದಾರೆ. ನೂತನ ನಿರ್ದೇಶಕ ರವೀಂದ್ರ ಪುಲ್ಲೆ ಸಾರಥ್ಯದಲ್ಲಿ ಮೂಡಿಬರುತ್ತಿರುವ ಭಾರಿ ಬಜೆಟ್‌ನ ಪ್ಯಾನ್-ಇಂಡಿಯಾ ಸಿನಿಮಾ ‘ಮೈಸಾ’ ಚಿತ್ರದಲ್ಲಿ ರಶ್ಮಿಕಾ ಟೈಟಲ್ ಪಾತ್ರ ನಿರ್ವಹಿಸುತ್ತಿದ್ದಾರೆ.

 ‘ಮೈಸಾ’ ಚಿತ್ರದ ವಿಶೇಷತೆಗಳೇನು?

ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಗೊಂಡ ಬುಡಕಟ್ಟು ಸಮುದಾಯದ ಅತ್ಯಂತ ಧೀರ ಮಹಿಳೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಸಿನಿಮಾದ ಫಸ್ಟ್ ಗ್ಲಿಂಪ್ಸ್ ಮತ್ತು ಪೋಸ್ಟರ್‌ಗಳಲ್ಲಿ ರಶ್ಮಿಕಾ ಕೈಯಲ್ಲಿ ಕತ್ತಿ ಹಿಡಿದು, ರಕ್ತಸಿಕ್ತ ಅವತಾರದಲ್ಲಿ ಭೀಕರವಾಗಿ ದರ್ಶನ ನೀಡಿದ್ದು ಸಖತ್ ವೈರಲ್ ಆಗಿದೆ. ಈ ಪಾತ್ರಕ್ಕಾಗಿ ರಶ್ಮಿಕಾ ಬ್ಯಾಂಕಾಕ್‌ನಲ್ಲಿ ಕಠಿಣ ಸಮರ ಕಲೆ ಮತ್ತು ಸಾಹಸ ದೃಶ್ಯಗಳಿಗಾಗಿ ವಿಶೇಷ ತರಬೇತಿ ಪಡೆದಿದ್ದಾರೆ.

ಕೈ ಹಿಡಿಯುತ್ತಾ ಲೇಡಿ ಓರಿಯೆಂಟೆಡ್ ಸಿನಿಮಾ?

ಟಾಲಿವುಡ್‌ನಲ್ಲಿ ಮಹಿಳಾ ಪ್ರಧಾನ ಸಿನಿಮಾಗಳಿಗೆ ದೊಡ್ಡ ಇತಿಹಾಸವಿದೆ. ವಿಜಯಶಾಂತಿ ಚಿತ್ರಗಳು ಹಾಗೂ ಅನುಷ್ಕಾ ಶೆಟ್ಟಿ ‘ಅರುಂಧತಿ’ ಮಾದರಿಯಲ್ಲೇ ರಶ್ಮಿಕಾ ಮಂದಣ್ಣ ಕೂಡ ಉಗ್ರ ರೂಪ ತಾಳಿ ಸಿನಿರಸಿಕರನ್ನು ರಂಜಿಸಲು ಸಜ್ಜಾಗಿದ್ದಾರೆ. ಶೂಟಿಂಗ್ ವೇಳೆ ಸಣ್ಣಪುಟ್ಟ ಗಾಯಗಳಾದರೂ ಲೆಕ್ಕಿಸದೆ ರಶ್ಮಿಕಾ ರಗಡ್ ಸ್ಟಂಟ್‌ಗಳನ್ನು ಮಾಡುತ್ತಿರುವುದು ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

ಇದನ್ನೂ ಓದಿ:

ಅನ್‌ಫಾರ್ಮುಲಾ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಭಾರಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ‘ಮೈಸಾ’, ರಶ್ಮಿಕಾ ವೃತ್ತಿಜೀವನಕ್ಕೆ ಹೊಸ ತಿರುವು ನೀಡಲಿದೆಯೇ ಎಂಬುದನ್ನು ಕಾದುನೋಡಬೇಕಿದೆ. ಈ ಚಿತ್ರವು ಕನ್ನಡ, ತೆಲುಗು, ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ತೆರೆಕಾಣಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !