ಇದೆಂಥಾ ವಿಚಿತ್ರ, ಮಾವನನ್ನೇ ಮದುವೆಯಾದ ಸೊಸೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಗತ್ತಿನಲ್ಲಿ ನಾವು ಕಂಡರಿಯದ ಸಾಕಷ್ಟು ವಿಚಿತ್ರಗಳಿವೆ. ಸಾಮಾನ್ಯವಾಗಿ ತಂದೆಯ ನಂತರ ತಂದೆ ಸ್ಥಾನಕ್ಕೆ ಸಮೀಪ ಬರುವವರು ಮಾವ, ಆದರೆ ಇಲ್ಲಿ ಸೊಸೆಯೊಬ್ಬಳು ತನ್ನ ಮಾವನನ್ನೇ ಮದುವೆಯಾಗಿದ್ದಾಳೆ.

ಗೋರಖ್‌ಪುರದಲ್ಲಿ ಈ ಘಟನೆ ನಡೆದಿದ್ದು, 70 ವರ್ಷದ ಛಾಪ್ರಿಯಾ ಉಮ್ರಾವ್ ಗ್ರಾಮದ ನಿವಾಸಿ ಕೈಲಾಶ್ ಯಾದವ್ ತನ್ನ 28 ವರ್ಷದ ಸೊಸೆ ಪೂಜಾಳನ್ನು ವರಿಸಿದ್ದಾರೆ.

ಮಗನ ಮರಣ ನಂತರ ಸೊಸೆ ಪೂಜಾ ತನ್ನ ಜೀವನವನ್ನು ಬೇರೆಡೆ ನಡೆಸಲು ತಯಾರಾಗಿದ್ದಳು, ಕಾಲಕ್ರಮೇಣ ಪತ್ನಿಯನ್ನು ಕಳೆದುಕೊಂಡಿದ್ದ ತನ್ನ ಮಾವನನ್ನೇ ಆಕೆ ಪ್ರೀತಿಸಿದ್ದಾಳೆ ಎನ್ನಲಾಗಿದೆ. ತದನಂತರ ಇಬ್ಬರು ದೇವಸ್ಥಾನಕ್ಕೆ ತೆರಳಿ ಮದುವೆಯಾಗಿದ್ದಾರೆ.

ಇದು ತಪ್ಪು, ಇದು ಸಮಾಜಕ್ಕೆ ಉತ್ತಮ ಉದಾಹರಣೆಯಲ್ಲ, ಮಾವ ತಂದೆ ಸಮಾನ ಎಂದು ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!