ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಾಗಿಣಿ ಐದು ವರ್ಷದಿಂದ ಒಂದೇ ತೂಕವನ್ನು ಮೇಂಟೇನ್ ಮಾಡಿದ್ದಾರಂತೆ, ಐದು ವರ್ಷದಿಂದಲೂ 50 ಕೆಜಿ ತೂಕದಲ್ಲೇ ಇರೋ ರಾಗಿಣಿ ದಿನವಿಡೀ ಏನೆಲ್ಲಾ ತಿಂತಾರೆ?
ಬೆಳಗ್ಗೆ ಎದ್ದ ತಕ್ಷಣ ಮನೆಯಲ್ಲಿ ಎಲ್ಲರೂ ಆಯಿಲ್ ಪುಲ್ಲಿಂಗ್ ಮಾಡ್ತೀವಿ, ಇದು ಕಂಪಲ್ಸರಿ, ಬಾಯಿಗೆ ಕೊಬ್ಬರಿ ಎಣ್ಣೆ ಹಾಕಿ 15 ನಿಮಿಷ ಆಯಿಲ್ ಪುಲ್ಲಿಂಗ್ ಮಾಡ್ತೇವೆ, ಮನೆಯಲ್ಲಿ ಯಾರೂ ತಿಂಡಿ ತಿನ್ನೋದಿಲ್ಲ ಎಲ್ಲರೂ ಇಂಟರ್‌ಮಿಟ್ಟೆಂಟ್ ಫಾಸ್ಟಿಂಗ್ ಮಾಡ್ತೀವಿ. ದಿನಕ್ಕೆ ಮೂರು ರೀತಿ ಜ್ಯೂಸ್ ಕಡ್ಡಾಯವಾಗಿ ಕುಡೀತಿನಿ. ಅದರಲ್ಲಿ ನಿಂಬು ಜ್ಯೂಸ್ ಮಸ್ಟ್, ಹಣ್ಣಿನ ಜ್ಯೂಸ್ ಇಲ್ಲವಾದ್ರೆ ಕ್ಯಾರೆಟ್ ಜ್ಯೂಸ್ ಮತ್ತು ಬೂದುಗುಂಬಳಕಾಯಿ ಜ್ಯೂಸ್ ಕುಡೀತಿನಿ ಇದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಅಂತಾರೆ ರಾಗಿಣಿ.
ಮಧ್ಯಾಹ್ನದ ಊಟಕ್ಕೆ ರಾಗಿ, ಗೋಧಿ ಹಾಗೂ ನವಣೆಯನ್ನು ಇಷ್ಟಪಡ್ತೀನಿ, ಜೊತೆಗೆ ತರಕಾರಿ ಪಲ್ಯ ಹೆಚ್ಚು ತಿಂತೀನಿ, ಅನ್ನದಷ್ಟು ಪಲ್ಯ, ಪಲ್ಯದಷ್ಟು ಅನ್ನ ತಿನ್ನೋದು ಬೆಸ್ಟ್. ಚೀಟ್ ಮೀಲ್, ಜಂಕ್ ಫುಡ್ ತಿನ್ನಿ ಆದ್ರೆ ದುಃಖದಲ್ಲಿ ತಿನ್ಬೇಡಿ, ಹಾರ್ಮೋನ್ ಮೇಲೆ ಪರಿಣಾಮ ಬೀರುತ್ತದೆ. ರಾತ್ರಿ ಊಟಕ್ಕೆ ಜ್ಯೂಸ್ ಇಷ್ಟಪಡ್ತೇವೆ, ಇಲ್ಲವಾದ್ರೂ ಮನೆಯ ಊಟ. ಎಂಟು ಗಂಟೆ ನಂತರ ಏನೂ ತಿನ್ನೋದಿಲ್ಲ. ಬೆಳಗ್ಗೆ ವರ್ಕೌಟ್ ಮಸ್ಟ್ ಎಂದು ರಾಗಿಣಿ ಸಲಹೆ ನೀಡಿದ್ದಾರೆ.