ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾವೇರಿ ನೀರಿಗಾಗಿ ಹೋರಾಟ ಹೆಚ್ಚಾಗಿದ್ದು, ಕನ್ನಡಪರ ಸಂಘಟನೆಗಳು ಸೆ.26ರಂದು ಬೆಂಗಳೂರು ಬಂದ್‌ಗೆ ಕರೆ ನೀಡಿವೆ. ಈ ಬಂದ್‌ಗೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಬಿಜೆಪಿ ಹೇಳಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರ್ಖರ ಸರ್ಕಾರ, ಎಷ್ಟು ವಿಶೇಷ ಅಧಿವೇಶನ ಕರೆದರೂ ಪ್ರಯೋಜನ ಇಲ್ಲ. ಸಿಎಂ, ಡಿಸಿಎಂ ಸಭೆ ಮಾಡ್ತಾನೇ ಇರಲಿ, ಆದ್ರೆ ಇದ್ರಿಂದ ಪ್ರಯೋಜನ ಇಲ್ಲ. ಕಾವೇರಿ ಹೋರಾಟ ಅನಿವಾರ್ಯ ಹಾಗಾಗಿ ಬಂದ್‌ಗೆ ಬೆಂಬಲ ಸೂಚಿಸಿದ್ದೇವೆ ಎಂದಿದ್ದಾರೆ.
ಡಿಕೆಶಿ ರಿಯಾಕ್ಷನ್: ಯಡಿಯೂರಪ್ಪ ಕಾಂಗ್ರೆಸ್ ಸರ್ಕಾರ ಮೂರ್ಖರ ಸರ್ಕಾರ ಎಂದಿದ್ದಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ.
ರೈತರ ಹಿತ ಕಾಯಲು ನಿಂತ ನಾವು ಮೂರ್ಖರು ಹೇಗಾದ್ವಿ? ಸುಮ್ಮನೆ ಬಂದ್ ಮಾಡೋದು, ಬಂದ್‌ಗೆ ಬೆಂಬಲ ಕೊಡೋದ್ರಲ್ಲಿ ಯಾವ ಲಾಭವೂ ಇಲ್ಲ. ರಾಜ್ಯ ಸರ್ಕಾರವೇ ಹೋರಾಟಕ್ಕೆ ನಿಂತಿದೆ ಎಂದಿದ್ದಾರೆ.