Sunday, August 14, 2022

Latest Posts

ಈ ಕಾರಣಕ್ಕೆ ಮಗು ಮಾಡಿಕೊಂಡಿಲ್ಲ: ಕೊನೆಗೂ ಕಾರಣ ಬಿಚ್ಚಿಟ್ಟ ರಾಮ್ ಚರಣ್ ಪತ್ನಿ ಉಪಾಸನಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಟಾಲಿವುಡ್ ಸ್ಟಾರ್ ಕಪಲ್ ರಾಮ್ ಚರಣ್ ಮತ್ತು ಉಪಾಸನಾ ದಂಪತಿ ಮದುವೆಯಾಗಿ ಹತ್ತು ವರ್ಷವಾದರೂ ಅಭಿಮಾನಿಗಳಿಗೆ ಯಾವುದೇ ಗುಡ್ ನ್ಯೂಸ್ ನೀಡಲಿಲ್ಲ. ಹಾಗಾಗಿ ರಾಮ್ ಚರಣ್ ಜೋಡಿ ಎಲ್ಲೇ ಹೋದರು ಜೂ. ರಾಮ್ ಅಥವಾ ಉಪಾಸನಾ ಎಂಟ್ರಿ ಯಾವಾಗಾ ಎಂದು ಕೇಳುತ್ತಲೇ ಇರುತ್ತಾರೆ.
ರಾಮ್ ಚರಣ್ ಮತ್ತು ಉಪಾಸನಾ ಮದುವೆಯಾಗಿ 10 ವರ್ಷಗಳು ಪೂರೈಸಿದೆ. 2012ರಲ್ಲಿ ರಾಮ್ ಚರಣ್, ಉಪಾಸನ ಜೊತೆ ಹಸೆಮಣೆ ಏರಿದರು. 10 ವರ್ಷಗಳಾದರೂ ಯಾಕೆ ಇನ್ನು ಮಕ್ಕಳು ಮಾಡಿಕೊಂಡಿಲ್ಲ ಎನ್ನುವ ಪ್ರಶ್ನೆ ಸ್ಟಾರ್ ಜೋಡಿಗೆ ಎದುರಾಗುತ್ತಲೇ ಇದೆ.
ಉಪಾಸನಾ ಕಾಮಿನೇನಿ ಕೊನಿಡೇಲಾ ಅವರು ವೈವಾಹಿಕ ಜೀವನದಲ್ಲಿ ತುಂಬಾ ಸಂತೋಷವಾಗಿದ್ದಾರೆ ಮತ್ತು ಅದನ್ನು ಪೂರ್ಣವಾಗಿ ಆನಂದಿಸುತ್ತಿದ್ದಾರೆ. ಆದರೆ ದಂಪತಿ ಏಕೆ ಮಗುವನ್ನು ಹೊಂದಿಲ್ಲ ಎಂದು ಅವರನ್ನು ಪ್ರಶ್ನೆಮಾಡಲಾಗುತ್ತಿದೆ. ಅನೇಕ ಬಾರಿ ಇಬ್ಬರೂ ಶೀಘ್ರದಲ್ಲೇ ಮಗುವನ್ನು ಹೊಂದಲು ಆಸಕ್ತಿ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಇದೀಗ ಮತ್ತೊಮ್ಮೆ ಉಪಾಸನಾ ಈ ಬಗ್ಗೆ ಮಾತನಾಡಿದ್ದಾರೆ.

ಸದ್ಗುರು ಜೊತೆ ಉಪಾಸನರ ಇತ್ತೀಚಿನ ಸಂವಾದದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಉಪಾಸನಾ, ಸಂಬಂಧ, ಉತ್ಪಾದನೆ ಮತ್ತು ಜೀವನದ ಬಗ್ಗೆ ಮಾತನಾಡಿದ್ದಾರೆ. ಬಳಿಕ ಉಪಾಸನಾ ಮಗುವನ್ನು ಯಾಕೆ ಹೊಂದಿಲ್ಲ ಎಂದು ರಿವೀಲ್ ಮಾಡಿದರು.
ಜನಸಂಖ್ಯೆ ನಿಯಂತ್ರಣದ ಕಾರಣದಿಂದ ಮಗುವನ್ನು ಹೊಂದಿಲ್ಲ ಎಂದು ಉಪಾಸನಾ ಬಹಿರಂಗ ಪಡಿಸಿದರು.ಉಪಾಸನಾ ಮಾತಿಗೆ ಪ್ರತಿಕ್ರಿಯೆ ನೀಡಿದ ಸದ್ಗುರು, ‘ಮನುಷ್ಯ ಹೊರ ಬಿಡುವ ಇಂಗಾಲದ ಡಯಾಕ್ಸೈಡ್‌ನಿಂದ ಜಾಗತಿಕ ತಾಪಮಾನ ಹೆಚ್ಚುತ್ತಿರುವುದು ಎಲ್ಲರಿಗೂ ಕಳವಳದ ವಿಚಾರವಾಗಿದೆ. ಮಾನವ ಸಂಕುಲ ಕಡಿಮೆಯಾದರೆ ಇಂಗಾಲದ ಡಯಾಕ್ಸೈಡ್‌ ಕೂಡ ಕಡಿಮೆಯಾಗಲಿದೆ. ಒಬ್ಬ ಮಹಿಳೆ ಮಗುವಿಗೆ ಜನ್ಮ ನೀಡುವುದಿಲ್ಲ ಎಂಬ ತೀರ್ಮಾನ ಮಾಡಿದರೆ ಅದು ಪ್ರಕೃತಿಗೆ ಒಳ್ಳೆಯದು ಎಂದು ಹೇಳಿದರು.
ಸದ್ಗುರುಗಳ ಮಾತು ಕೇಳಿ ಉಪಾಸನಾ ಇಂಪ್ರೆಸ್ ಆಗಿದ್ದಾರೆ. ಸದ್ಗುರು ಆಲೋಚನೆ ಕೇಳಿ ರಾಮ್ ಅವರ ಪತ್ನಿ ಪ್ರಭಾವಿತರಾದರು ಮತ್ತು ಅವರು ಶೀಘ್ರದಲ್ಲೇ ತನ್ನ ತಾಯಿ ಮತ್ತು ಅತ್ತೆಯನ್ನು ಭೇಟಿ ಮಾಡಿಸಲು ಇಷ್ಟಪಡುತ್ತೇನೆ ಎಂದು ಹೇಳಿದರು.
‘ನಾನು ನಿಮ್ಮನ್ನು ನನ್ನ ಅಮ್ಮ ಮತ್ತು ಅತ್ತೆಯೊಂದಿಗೆ ಶೀಘ್ರದಲ್ಲೇ ಮಾತನಾಡುವಂತೆ ಮಾಡುತ್ತೇನೆ’ ಎಂದು ಉಪಾಸನಾ ಹೇಳಿದರು. ಈ ಮೂಲಕ ಉಪಾಸನಾ ಪದೇ ಪದೇ ಎದುರಾಗುತ್ತಿದ್ದ ಪ್ರಶ್ನೆಗೆ ಬ್ರೇಕ್ ಹಾಕಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss