ಹೊಸದಿಗಂತ ಡಿಜಿಟಲ್ ಡೆಸ್ಕ್:
ಪುಷ್ಪ 2 ಪ್ರೀಮಿಯರ್ ಶೋ ವೇಳೆ ಕಾಲ್ತುಳಿತ ಸಂಭವಿಸಿ ಮಹಿಳೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿಂತೆ ನಟ ಅಲ್ಲು ಅರ್ಜುನ್ ಅವರನ್ನು ಹೈದರಾಬಾದ್‌ನ ಚಿಕ್ಕಡಪಲ್ಲಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ನಟನ ಬೆಡ್‌ರೂಮ್‌ಗೆ ನುಗ್ಗಿ ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಲಾಗಿತ್ತು. ಈ ಬೆನ್ನಲ್ಲೇ ವಿಡಿಯೋವೊಂದು ವೈರಲ್ ಆಗಿದೆ. ಈ ವೀಡಿಯೋನಲ್ಲಿ ಪೊಲೀಸರು ತಮ್ಮನ್ನು ಬಂಧಿಸಿದ ರೀತಿಗೆ ನಟ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.
ಪೊಲೀಸರಿಗೆ ಸಹಕರಿಸಲು ಸಿದ್ಧನಿರುವಾಗ ಬೆಡ್‌ರೂಮ್‌ಗೆ ನುಗ್ಗುವ ಅವಶ್ಯಕತೆ ಏನಿತ್ತು? ನಾನು ಬೆಡ್‌ರೂಮ್‌ನಲ್ಲಿ ಬಟ್ಟೆ ಬದಲಾಯಿಸುತ್ತಿದ್ದೆ. ಹೊರಗಡೆ ಬಂದು ಕರೆದಿದ್ರೆ ಬರ್ತಿದ್ದೆ. ನೀವು ಬಂದಿದ್ದು, ಕರ್ಕೋಂಡು ಹೋಗಿದ್ದು ತಪ್ಪಲ್ಲ, ಆದ್ರೆ ಬೆಡ್ ರೂಮ್ ಹತ್ರ ಬಂದಿರೋದು ತಪ್ಪು. ದಿಸ್ ಈಸ್ ಟೂ ಮಚ್, ಇದು ಒಳ್ಳೇದು ಅಲ್ಲ ಸರ್ ಎಂದು ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೇ ನಟ ಕಾಫಿ ಕುಡಿದ ಬಳಿಕ ಚಿಕ್ಕಡಪಲ್ಲಿ ಪೊಲೀಸರು ತಮ್ಮ ಕಾರಿನಲ್ಲಿ ನಟನನ್ನು ಕರೆದೊಯ್ದಿದ್ದನ್ನು ವೀಡಿಯೋದಲ್ಲಿ ತೋರಿಸಲಾಗಿದೆ.