ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿಗೆ ಕೆಆರ್‌ಎಸ್ ಡ್ಯಾಮ್‌ನಿಂದ 5000 ಕ್ಯುಸೆಕ್ ನೀರು ಹರಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದ್ದು, ರಾಜ್ಯಕ್ಕೆ ಸಂಕಷ್ಟ ತಂದಿದೆ.
ಈ ಬಗ್ಗೆ ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ ಮಾತನಾಡಿದ್ದು, ನೀರಾವರಿ ಬಗ್ಗೆ ಕನಿಷ್ಠ ಜ್ಞಾನ ಇಲ್ಲದವರು ಅಧಿಕಾರದಲ್ಲಿ ಇದ್ದರೆ ಇನ್ನೇನಾಗೋಕೆ ಸಾಧ್ಯ? ಇಂಥವರ ಕೈಲಿ ಅಧಿಕಾರ ಇದ್ದರೆ ಏನಾಗುತ್ತದೆ ಎನ್ನೋದಕ್ಕೆ ಇದು ಸ್ಪಷ್ಟ ಉದಾಹರಣೆ. ಪ್ರತೀ ಹೆಜ್ಜೆಗೂ ಕಾಂಗ್ರೆಸ್ ತಪ್ಪು ಮಾಡಿದೆ.
ನ್ಯಾಯಾಲಯದ ಬಗ್ಗೆ ಎರಡು ಮಾತಿಲ್ಲ, ಜನಪರ ಕಾಳಜಿ ಇಲ್ಲದ ಸರ್ಕಾರ ಇರುವಾಗ ಯಾರು ಹೊಣೆಯಾಗಲು ಸಾಧ್ಯ? ಕಾವೇರಿ ವಿಷಯದಲ್ಲಿ ರಾಜಕೀಯ ಮಾಡಬಾರದು, ನಾವು ಹೇಳಿದ ಸಲಹೆಗಳನ್ನು ಸೌಜನ್ಯಕ್ಕಾದರೂ ಕೇಳಿಸಿಕೊಳ್ಳಬೇಕಿತ್ತು ಎಂದಿದ್ದಾರೆ.