August 25, 2026
Tuesday, August 25, 2026
spot_img

ವರ್ಕ್‌ ಲೈಫ್‌ ಬ್ಯಾಲೆನ್ಸ್‌ ಅಂದ್ರೆ ಇದಪ್ಪಾ! ಸಹರಾ ಮರುಭೂಮಿಯಲ್ಲಿ ಒಂಟೆ ಮೇಲೆ ಕುಳಿತು ಮೀಟಿಂಗ್‌ ಅಟೆಂಡ್‌ ಮಾಡಿದ ಉದ್ಯೋಗಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವರ್ಕ್‌ ಫ್ರಮ್‌ ಹೋಮ್‌ ಅಂದ್ರೆ ಬರೀ ವರ್ಕ್‌ ಫ್ರಮ್‌ ಹೋಮ್‌ ಅಂತ ಅಷ್ಟೇ ಅರ್ಥ ಅಲ್ಲ! ಮನೆಯಿಂದ, ಮದುವೆ ಮಂಟಪದಿಂದ, ಮಾಲ್‌ನಿಂದಲೂ ಕೆಲಸ ಮಾಡ್ಬೋದು. ಆದರೆ ಇಲ್ಲೊಬ್ಬ ಉದ್ಯೋಗಿ ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದು, ಸಹಾರಾ ಡೆಸರ್ಟ್‌ನಲ್ಲಿ ಟ್ರಿಪ್‌ ಮಾಡ್ತಾ ಕೆಲಸ ಮಾಡಿದ್ದಾರೆ.

ಝೂಮ್‌ ಮೀಟಿಂಗ್‌ ಇದ್ದ ಸಮಯದಲ್ಲಿ ಒಂಟೆ ಮೇಲೆ ಕುಳಿತು ಸಹಾರಾದಲ್ಲಿ ಓಡಾಡ್ತಿದ್ದ ಉದ್ಯೋಗಿ ಅಲ್ಲಿಂದಲೇ ಮೀಟಿಂಗ್‌ ಅಟೆಂಡ್‌ ಮಾಡಿದ್ದಾರೆ.ಪ್ರಣವ್‌ ಹೆಸರಿನ ಎಕ್ಸ್‌ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಅಸಮಾನ್ಯ ಸೆಟಪ್‌ನಲ್ಲಿ ಲ್ಯಾಪ್‌ಟಾಪ್‌ ತೆಗೆದುಕೊಂಡು ವ್ಯಕ್ತಿ ಝೂಮ್‌ ಮೀಟಿಂಗ್‌ಗೆ ಹಾಜರಾಗಿದ್ದಾರೆ.

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಈ ಮರುಭೂಮಿಯಲ್ಲಿ ಇಂಟರ್ನೆಟ್ ಸಂಪರ್ಕ ಹೇಗೆ ಸಿಕ್ಕಿತು ಎಂದು ಕೇಳಿದ್ದಾರೆ. ಇನ್ನೊಬ್ಬರು, ಕೆಲಸದ ಮೇಲಿನ ಶ್ರದ್ಧೆಗೆ ನನ್ನದೊಂದು ಸಲಾಂ ಎಂದು ಹೇಳಿದ್ದಾರೆ. ಮತ್ತೊಬ್ಬರು, ವರ್ಕ್‌ ಹಾಗೂ ಲೈಫ್‌ನ್ನು ಈ ರೀತಿ ಬ್ಯಾಲೆನ್ಸ್‌ ಮಾಡಬೇಕು. ಯಾವುದಕ್ಕೂ ಕಾಂಪ್ರಮೈಸ್‌ ಇರಬಾರದು ಎಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !