ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಮಾಜ ವಿಜ್ಞಾನ ಪರೀಕ್ಷೆಯಲ್ಲಿ ‘ಮದುವೆ ಎಂದರೇನು?’ ಎಂದು 10 ಅಂಕಗಳ ಪ್ರಶ್ನೆ ಇತ್ತು. ವಿದ್ಯಾರ್ಥಿಯೊಬ್ಬ ಬರೆದಿರುವ ಉತ್ತರ ಜನರನ್ನು ನಗೆಗಡಲಲ್ಲಿ ತೇಲಿಸುತ್ತಿದೆ. ಉತ್ತರ ಪತ್ರಿಕೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿದ್ಯಾರ್ಥಿ ಉತ್ತರ ಹೀಗಿದೆ. ಹುಡುಗಿಯ ಹೆತ್ತವರು ನೀನು ಬೆಳೆದು ದೊಡ್ಡವಳಾಗಿದ್ದೀಯ, ನಿನಗೀಗ ಊಟ ಬಟ್ಟೆ ಕೊಡಲು ನಮ್ಮಿಂದ ಸಾಧ್ಯವಿಲ್ಲ. ನಿನಗೆ ಅನ್ನ ನೀಡುವವನ್ನು ನೀನೆ ಹುಡುಕಿಕೊ ಎಂದು ಹೇಳುತ್ತಾರೆ. ಮತ್ತೊಂದೆಡೆ, ಹುಡುಗನ ಪೋಷಕರು ಕೂಡಾ ಮದುವೆಯಾಗುವಂತೆ ಬೆನ್ನಿಗೆ ಬೀಳುತ್ತಾರೆ. ಹೀಗಿರುವಾಗ ಇಬ್ಬರೂ ಮದುವೆಯಾಗುವುದಕ್ಕೆ ನಿರ್ಧರಿಸಿ ಹುಡುಗಿ ಮತ್ತು ಹುಡುಗ ಮದುವೆಯಾಗಿ ಒಟ್ಟಿಗೆ ಸಂತೋಷದಿಂದ ಬದುಕಲು ನಿರ್ಧರಿಸುತ್ತಾರೆ ಎಂದು ವಿದ್ಯಾರ್ಥಿ ಬರೆದಿದ್ದಾರೆ.
ವಿದ್ಯಾರ್ಥಿ ಬರವಣಿಗೆ ಕಂಡು ಶಿಕ್ಷಕರಿಗೆ ತಲೆತಿರುಗಿದಂತಾಗಿರಬೇಕು ಆ ಉತ್ತರಕ್ಕೆ ಶೂನ್ಯ ಅಂಕಗಳನ್ನು ನೀಡಿದ್ದಾರೆ. ಈ ಘಟನೆ ಎಲ್ಲಿ ನಡೆದಿದೆ ಎಂಬುದು ತಿಳಿದಿಲ್ಲ, ಆದರೆ ಉತ್ತರ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
What is marriage? 😂 pic.twitter.com/tM8XDNd12P
— Velu (@srpdaa) October 11, 2022