ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಅನೇಕ ಕಾರಣಗಳಿಂದಾಗಿ ದಕ್ಷಿಣ-ಆಂತರಿಕ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಈ ಚಳಿಗಾಲದ ಅವಧಿ ಅಲ್ಪಾವಧಿಯಾಗಿದ್ದು ಕಡಿಮೆ ಚಳಿ ಇರುತ್ತದೆ.
ಭಾರತೀಯ ಹವಾಮಾನ ಇಲಾಖೆ ಮಾಹಿತಿ ಮತ್ತು ಅವಲೋಕನಗಳ ಪ್ರಕಾರ ರಾಜ್ಯದ ಬಹುತೇಕ ಭಾಗಗಳಲ್ಲಿ, ವಿಶೇಷವಾಗಿ ದಕ್ಷಿಣ-ಆಂತರಿಕ ಮತ್ತು ಕರಾವಳಿ ಪ್ರದೇಶಗಳಲ್ಲಿ ಚಳಿಗಾಲದ ಆರಂಭದ ಮೇಲೆ ಸೈಕ್ಲೋನ್ ಪ್ರಭಾವ ಬೀರಿವೆ. ಈ ಬಾರಿ ನೈಋತ್ಯ ಮತ್ತು ಈಶಾನ್ಯ ಮಾನ್ಸೂನ್ ವಿಸ್ತರಣೆಯಾಗಿದೆ. ಪೂರ್ವದ ಮಾರುತಗಳು ಡಿಸೆಂಬರ್‌ನಲ್ಲಿಯೂ ಮುಂದುವರಿಯಲಿದ್ದು, ತೇವಾಂಶ ಮತ್ತು ಮಳೆಯನ್ನು ತರುತ್ತದೆ, ಇದು ದಕ್ಷಿಣ-ಆಂತರಿಕ ಕರ್ನಾಟಕದ ಚಳಿಗಾಲದ ಮೇಲೆ ಪರಿಣಾಮ ಬೀರುತ್ತದೆ. ರಾಜ್ಯದ ದಕ್ಷಿಣ ಜಿಲ್ಲೆಗಳಲ್ಲಿ ಚಳಿಗಾಲ ವಿಳಂಬವಾಗಿದೆ ಎಂದು ಐಎಂಡಿ ಬೆಂಗಳೂರು ಪ್ರಭಾರಿ ನಿರ್ದೇಶಕ ಎನ್ ಪುವಿಯಸರನ್ ಹೇಳಿದ್ದಾರೆ.
ವ್ಯವಸ್ಥೆಗಳ ರಚನೆಯು ದಕ್ಷಿಣ-ಆಂತರಿಕ ಕರ್ನಾಟಕ ಮತ್ತು ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆಗೆ ಕಾರಣವಾಗಿದೆ ಎಂದು ಅವರು ಹೇಳಿದರು. ಅಲ್ಲದೆ, ಹಲವು ದಿನಗಳು ಮೋಡ ಕವಿದ ವಾತಾವಾರಣವಿತ್ತು,ಹೀಗಾಗಿ ಚಳಿಗಾಲದ ಮೇಲೆ ಪರಿಣಾಮ ಬೀರಿದೆ ಎಂದು ಅವರು ಹೇಳಿದರು. ಪೂರ್ವ ದಿಕ್ಕಿನ ಮಾರುತಗಳು ಹೆಚ್ಚಾದಾಗ ಹೆಚ್ಚು ಮಳೆ ಮತ್ತು ಕಡಿಮೆ ಚಳಿಗಾಲ ಇರುತ್ತದೆ ಎಂದು ಅವರು ವಿವರಿಸಿದರು. ಮುಂದಿನ ದಿನಗಳಲ್ಲಿ ಮತ್ತೊಂದು ವ್ಯವಸ್ಥೆ ರೂಪುಗೊಳ್ಳುತ್ತಿರುವುದರಿಂದ ಕೆಲವು ಪ್ರದೇಶಗಳಲ್ಲಿ ಚಳಿಗಾಲದ ಚಳಿಯು ತಿಂಗಳ ಅಂತ್ಯದ ವೇಳೆಗೆ ಪ್ರಾರಂಭವಾಗುವ ಸಾಧ್ಯತೆಯಿದೆ.