ಇಂದು ಸೂರ್ಯಗ್ರಹಣ, ಯಾವ ಸಮಯದಲ್ಲಿ ಸೂರ್ಯಗ್ರಹಣ, ಏನು ಮಾಡಬೇಕು? ಮಾಡಬಾರದು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೀಪಾವಳಿ ಆಚರಣೆ ಹಿನ್ನೆಲೆಯಲ್ಲಿ ಈ ಬಾರಿ ಖಂಡಗ್ರಾಸ ಸೂರ್ಯಗ್ರಹಣ ಆಗಮಿಸಿದೆ.
ನರಕ ಚತುದರ್ಶಿ ಆಚರಣೆ ಮಾಡಿರುವ ಭಕ್ತರು ಇಂದು ಲಕ್ಷ್ಮಿಪೂಜೆ ನಡೆಸುವುದಿಲ್ಲ. ಯಾವುದೇ ಧಾರ್ಮಿಕ ಕಾರ್ಯಕ್ರಮ ನಡೆಯುವುದಿಲ್ಲ.

ಅಶ್ವಯುಜ ಅಮಾವಸ್ಯೆಯಂದು ಸೂರ್ಯಗ್ರಹಣ ಆಗಮಿಸಿದ್ದು, ಭಾರತ ಸಹಿತ ಏಷ್ಯಾ ಖಂಡದ ಮಧ್ಯ ಮತ್ತು ಪಶ್ಚಿಮದ ಪ್ರದೇಶ, ಸಂಪೂರ್ಣ ಯುರೋಪ್ ಖಂಡ, ಆಫ್ರಿಕಾ ಖಂಡದ ಪೂರ್ವೋತ್ತಮ ಪ್ರದೇಶಗಳಲ್ಲಿ ಗ್ರಹಣ ಕಾಣಲಿದೆ. ಭಾರತದಲ್ಲಿ ಸಂಜೆ 4:29 ರಿಂದ ಗ್ರಹಣ ಆರಂಭವಾಗಲಿದ್ದು, ಸೂರ್ಯಾಸ್ತದೊಂದಿಗೆ ಮುಕ್ತಾಯವಾಗಲಿದೆ. ಬೆಂಗಳೂರಿನಲ್ಲಿ ಸಂಜೆ 5:12 ರಿಂದ 5:56 ರವರೆಗೆ ಒಟ್ಟಾರೆ 44 ನಿಮಿಷ ಗ್ರಹಣ ಗೋಚರಿಸಲಿದೆ.

ಗ್ರಹಣ ಕಾಲದಲ್ಲಿ ಸ್ನಾನ, ದೇವರಪೂಜೆ, ನಿತ್ಯಕರ್ಮಗಳು, ಜಪತಪ ಹಾಗೂ ಶ್ರಾದ್ಧ ಮಾಡಬಹುದು. ಆಹಾರ ಸೇವನೆ ಮಾಡುವಂತಿಲ್ಲ. ಮಧ್ಯಾಹ್ನ 12 ಗಂಟೆಯ ಒಳಗೆ ಊಟ ತಿಂಡಿ ಮಾಡಬೇಕು, ಇನ್ನು ಮರುದಿನ ಸ್ನಾನ ಮಾಡಿ, ಪೂಜೆ ಮುಗಿಸಿ ಆಹಾರ ತಯಾರಿಸಿ ತಿನ್ನಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!