ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್‌ನಲ್ಲಿ ಅತಿ ಹೆಚ್ಚು ವಿಚಿತ್ರ ಬಟ್ಟೆ ಹಾಕೋದು ರಣ್‌ವೀರ್ ಸಿಂಗ್, ಯಾವುದೇ ಕಾರ್ಯಕ್ರಮ ಇರಲಿ, ಪಾರ್ಟಿ ಇರಲಿ ರಣ್‌ವೀರ್ ವಿಭಿನ್ನವಾದ ಬಟ್ಟೆ ತೊಟ್ಟು ಬರುತ್ತಾರೆ.
ದೀಪಿಕಾ ಬಟ್ಟೆಗಳನ್ನು ಹಾಕ್ತಾರೆ ಅಂತ ಎಷ್ಟೋ ಬಾರಿ ರಣ್‌ವೀರ್ ಟ್ರಾಲ್ ಆಗಿದ್ದಾರೆ. ಆದರೆ ಈ ಬಾರಿ ದೀಪಿಕಾ ಪಡುಕೋಣ್ ರಣ್‌ವೀರ್ ಬಟ್ಟೆ ಹಾಕಿದ್ದಾರಾ ಅಂತ ಅನುಮಾನ ಕಾಡಿದೆ.
ಗೆಹ್ರಾಯಿಯಾ ಪ್ರಮೋಷನ್‌ಗಾಗಿ ದೀಪಿಕಾ ತೆರಳಿದ್ದು, ಝೀಬ್ರಾ ಪ್ರಿಂಟ್‌ನ ಶಾರ್ಟ್ ಡ್ರೆಸ್ ತೊಟ್ಟಿದ್ದಾರೆ. ಇದನ್ನು ಕಂಡ ನೆಟ್ಟಿಗರು ಇದು ರಣ್‌ವೀರ್ ಬಟ್ಟೆ ತಾನೆ ಎಂದು ದೀಪಿಕಾ ಕಾಲೆಳೆದಿದ್ದಾರೆ.
ನಿಜವಾಗಿಯೂ ಇವರು ಹಾಕಿದ್ದು ರಣ್‌ವೀರ್ ಬಟ್ಟೇನಾ? ಉತ್ತರ ದೀಪಿಕಾ ಹತ್ತಿರ ಮಾತ್ರ ಇದೆ..