ಪ್ರಿಯಾಂಕ್ ಖರ್ಗೆ ಹೇಳಿಕೆ ವಿರೋಧಿಸಿ ʼಚಿತ್ತಾಪುರ ಚಲೋʼ, ಕ್ಷಮೆಯಾಚನೆಗೆ 2 ದಿನ ಗಡುವು: ಚಂದಮ್ಮ ಪಾಟೀಲ್

ಹೊಸದಿಗಂತ ವರದಿ, ಕಲಬುರಗಿ
ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರ  ʼಲಂಚ ಮಂಚʼ ಹೇಳಿಕೆಯನ್ನು ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಘಟಕ ಉಗ್ರವಾಗಿ ಖಂಡಿಸುತ್ತದೆ. ಈ ಹೇಳಿಕೆಯಿಂದ ಮಹಿಳೆಯರಿಗೆ ಅವಮಾನವಾಗಿದೆ. ಶಾಸಕ ಪ್ರಿಯಾಂಕ್ ಅವರು ಬೇಷರತ್ತಾಗಿ ಕೂಡಲೇ ಕ್ಷಮೆ ಯಾಚಿಸಬೇಕೆಂದು ರಾಜ್ಯ ಮಹಿಳಾ ಮೋಚಾ೯ ಘಟಕದ ಪ್ರಧಾನ ಕಾರ್ಯದರ್ಶಿ ಚಂದಮ್ಮ ಪಾಟೀಲ್ ಆಗ್ರಹಿಸಿದರು.
ಭಾನುವಾರ ನಗರದಲ್ಲಿ ಮಾತನಾಡಿದ ಅವರು, ಎರಡು ದಿನಗಳ ಗಡುವಿನೊಳಗೆ ಶಾಸಕ ಪ್ರಿಯಾಂಕ್ ಖರ್ಗೆ ಅವರ ಬಹಿರಂಗವಾಗಿ ಕ್ಷಮೇ ಕೇಳದೆ ಇದ್ದಲ್ಲಿ, ಅವರ ಮನೆ ಹಾಗೂ ಕಾಂಗ್ರೆಸ್ ಪಕ್ಷದ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪಕ್ಷದ ರಾಜ್ಯಾಧ್ಯಕ್ಷೆಯಾಗಿರುವ ಗೀತಾ ವಿವೇಕಾನಂದ ಅವರ ಆದೇಶದಂತೆ ಪ್ರಿಯಾಂಕ್‌ ಹೇಳಿಕೆ ವಿರೋಧಿಸಿ ʼನಮ್ಮ ನಡೆ ಚಿತ್ತಾಪುರ ಕಡೆ ಚಲೋʼ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು. ಈ ನಡೆಯಲ್ಲಿ ರಾಜ್ಯದ ಮಹಿಳಾ ಮೋಚಾ೯ದ ಸುಮಾರು 10,000 ಮಹಿಳೆಯರು ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಅನಿತಾ ಜಗನ್ನಾಥ, ಮೋರ್ಚಾ ಜಿಲ್ಲಾಧ್ಯಕ್ಷೆ ಭಾಗೀರಥಿ ಗುನ್ನಾಪುರ, ನಗರ ಅಧಕ್ಷೆ ಶೋಭಾ ಬಾಗೇವಾಡಿ, ರೇಣುಕಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!