ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಕೆ ತನ್ನ ಕೂದಲಿನ ಮೂಲಕ 12 ಸಾವಿರ ಕೆಜಿ ತೂಕದ ಬಸ್ ಅನ್ನು ಎಳೆಯುವ ಮೂಲಕ ಗಿನ್ನಿಸ್ ದಾಖಲೆ ಮಾಡಿದ್ದಾರೆ.
ಪಂಜಾಬ್ ಮೂಲದ ಯುವತಿ ಆಶಾ ರಾಣಿ ಈ ದಾಖಲೆ ಸೃಷ್ಟಿಸಿದ್ದಾರೆ. 12,216 ಕೆ.ಜಿ ತೂಕದ ಬಸ್ ಅನ್ನು ಕೂದಲಿನ ಮೂಲಕ ಎಳೆದಿದ್ದಾರೆ. 2014ರಲ್ಲಿ ಆಶಾ ತಮ್ಮ ಕಣ್ಣಿನ ರೆಪ್ಪೆಯ ಮೂಲಕ 15.15 ಕೆಜಿ ತೂಕ ಎತ್ತಿ ದಾಖಲೆ ಮಾಡಿದ್ದರು. ಬಳಿಕ 2019ರಲ್ಲಿ ಕಿವಿಗಳ ಮೂಲಕ 1700 ಕೆ.ಜಿ ತೂಕದ ವ್ಯಾನ್ ಎಳೆದಿದ್ದರು.
ಅಷ್ಟೇ ಅಲ್ಲ. ಇವರು ತಮ್ಮ ಹಲ್ಲಿನ ಮೂಲಕ ವಾಹನವನ್ನು ಕೇವಲ 22.16 ಸೆಕೆಂಡ್ ಗಳಲ್ಲಿ 25 ಮೀಟರ್ ಎಳೆದಿದ್ದರು. ಈ ಮೂಲಕ ಅವರು ಐರನ್ ಕ್ವೀನ್ ಎಂದು ಹೆಸರು ಪಡೆದಿದ್ದಾರೆ.
ಈ ವಿಡಿಯೋವನ್ನು ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಹಂಚಿಕೊಂಡಿದ್ದು, ಆಶಾ ರಾಣಿ ಕೂದಲಿನಿಂದ ಎಳೆದ ಅತ್ಯಂತ ತೂಕದ ವಾಹನ (12,216ಕೆ.ಜಿ) ಎಳೆದು ದಾಖಲೆ ಮಾಡಿದ್ದಾರೆ ಎಂದು ಬರೆದುಕೊಂಡಿದೆ.