ರಾಮನಿಗಾಗಿ ಇಲ್ಲದವರು ಯಾವ ಕೆಲಸಕ್ಕೂ ಸಲ್ಲರು: ‘ಮಹಾ’ ಸಿಎಂ ಖಡಕ್ ಮಾತು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಮಮಂದಿರವನ್ನು ವಿರೋಧಿಸುವವರಿಗೆ ಶ್ರೀರಾಮನ ಹೆಸರು ಉಚ್ಛರಿಸುವ ಹಕ್ಕಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಹೇಳಿದ್ದಾರೆ.

ಅಯೋದ್ಯೆ ರಾಮಮಂದಿರ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಮತ್ತು ಶಿವಸೇನಾ (ಯುಬಿಟಿ) ಬಣದ ನಡುವಿನ ವಾಕ್ಸಮರ ಜೋರಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಮಹಾರಾಷ್ಟ್ರ ಸಿಎಂ , ಬಾಳಾಸಾಹೇಬ್ ಠಾಕ್ರೆ ಸೇರಿದಂತೆ ಕೋಟ್ಯಂತರ ಭಕ್ತರ ಕನಸನ್ನು ಪ್ರಧಾನಿ ಮೋದಿ ನನಸಾಗಿಸಿದ್ದಾರೆ. ಇದಕ್ಕೆ ಅಯೋಧ್ಯೆಯ ರಾಮಮಂದಿರದಲ್ಲಿ ನಡೆದ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವೇ ಸಾಕ್ಷಿ. ಜನವರಿ 22 ಐತಿಹಾಸಿಕ ದಿನವಾಗಿರಲಿದೆ’ ಎಂದು ಹೇಳಿದ್ದಾರೆ.

ಇದೇ ವೇಳೆ ‘ರಾಮನಿಗಾಗಿ ಇಲ್ಲದವರು ಯಾವ ಕೆಲಸಕ್ಕೂ ಸಲ್ಲರು’ ಎಂದು ಶಿವಸೇನಾ ನಾಯಕರ ವಿರುದ್ಧ ಶಿಂದೆ ವಾಗ್ದಾಳಿ ನಡೆಸಿದ್ದಾರೆ.

ಸಂಜಯ್ ರಾವುತ್‌ ಹೇಳಿದ್ದೇನು?
ಸಮಾವೇಶವೊಂದರಲ್ಲಿ ಮಾತನಾಡಿರುವ ಶಿವಸೇನಾ (ಯುಟಿಬಿ) ಸಂಸದ ಸಂಜಯ್ ರಾವುತ್‌, ‘ಒಂದು ವೇಳೆ ಶಿವಸೇನಾ ಇಲ್ಲದೇ ಹೋಗಿದ್ದರೆ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಸಾಧ್ಯವಾಗುತ್ತಿರಲಿಲ್ಲ’ ಎಂದು ಹೇಳಿದ್ದಾರೆ.

‘ನಮಗೂ ರಾಮನಿಗೂ ಭಾರಿ ಹಳೆಯ ಸಂಬಂಧವಿದೆ. ರಾಮನೊಂದಿಗೆ ಶಿವಸೇನಾದ ಸಂಬಂಧ ತೀವ್ರ ಭಾವನಾತ್ಮಕವಾದುದು. ಅದು ಯಾವುದೇ ಪಕ್ಷ ಅಥವಾ ವ್ಯಕ್ತಿಗೆ ಸಂಬಂಧಿಸಿದಲ್ಲ. ಶ್ರೀರಾಮನೊಂದಿಗೆ ಯಾರಿಗಾದರೂ ಹಳೇಯ ಸಂಬಂಧ ಇದ್ದರೆ ಅದು ಶಿವಸೇನಾಗೆ ಮಾತ್ರ’ ಎಂದು ಅವರು ನುಡಿದಿದ್ದಾರೆ.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!