ಕಲಿತು, ತಿಳಿದವರೇ ವೋಟ್‌ ಮಾಡೋಕೆ ಬರ್ತಾ ಇಲ್ಲ: ಬಸವರಾಜ ಹೊರಟ್ಟಿ

ದಿಗಂತ ವರದಿ ಹುಬ್ಬಳ್ಳಿ:

ಪ್ರಜಾಪ್ರಭುತ್ವದಲ್ಲಿ ಕಲಿತವರು, ತಿಳಿದವರೇ ಕಡ್ಡಾಯ ಮತದಾನ ಮಾಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಈ ಬಗ್ಗೆ ಕೇಂದ್ರ ಚುನಾವಣೆ ಆಯೋಗ ಮುಂದಾಗಬೇಕೆಂದು ವಿಪ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ನಗರದ ಲ್ಯಾಮಿಂಗ್ಟನ್ ರಸ್ತೆಯಲ್ಲಿನ ಮತಗಟ್ಟೆ ಸಂಖ್ಯೆ 119 ಕ್ಕೆ ಕುಟುಂಬ ಸಮೇತರಾಗಿ ಆಗಮಿಸಿ ಅವರು ಮತದಾನ ಮಾಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತವನ್ನು ಚಲಾವಣೆ ಮಾಡಿದ್ದೇನೆ.‌ ಆದರೆ ಬಹಳಷ್ಟು ಜನರು ಮತದಾನ ಮಾಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈ ಚುನಾವಣೆ ಕೇವಲ ಟೀಕೆ ಟಿಪ್ಪಣಿಗಳಿಗೆ ಸೀಮಿತವಾಗಿದೆ. ಜನರ ಸಮಸ್ಯೆಗಳ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಅಸಮಾಧಾನಗೊಂಡರು.

ಮೂರು ತಲೆಮಾರಿನ ಜನರಿಂದ‌ ಮತದಾನ: ಹುಬ್ಬಳ್ಳಿಯಲ್ಲಿ ಮತದಾನ ಮಾಡಿ ವಿಶೇಷ ದಾಖಲೆ ಮಾಡಿದ ಮೂರು ತಲೆಮಾರಿನ ಮಹಿಳೆಯರು‌. ಹೌದು, ತಾಯಿ, ಮಗಳು, ಅಜ್ಜಿ ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಶಾಲೆಯಲ್ಲಿ ಒಂದೇ ಸಮಯದಲ್ಲಿ ಮತದಾನ ಮಾಡಿದರು. ಇನ್ನು ಇವರು ಎಲ್ಲಾ ಚುನಾವಣೆಗಳಲ್ಲಿ ಮೊದಲ ಮತದಾನ ಮಾಡುವ ಕುಟುಂಬವಾಗಿದೆ. ಸದ್ಯ ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಮತದಾನ ಮಾಡಿದ ಯುವತಿ ತಪಸ್ಯಾ ಪ್ರಭು, ಪ್ರತಿಬಾರಿ ಲ್ಯಾಮಿಂಗ್ಟನ್ ಶಾಲೆಯ ಬೂತ್‌ನಲ್ಲಿ ಫರ್ಸ್ಟ್ ಓಟ್ ಹಾಕುವ ಶಿಕ್ಷಕಿ ಸೌಮ್ಯ ಪ್ರಭು ಹಾಗೂ ಅಜ್ಜಿ ರಜನಿ ಪ್ರಭು ಜೊತೆ ಆಗಮಿಸಿ ಮತ ಚಲಾಯಿಸಿದರು. ಬಳಿಕ ಮತದಾನ ಪ್ರಜಾಪ್ರಭುತ್ವದ ಹಬ್ಬವಾಗಿದ್ದು ಸಂಭ್ರಮದಿಂದ ಆಚರಿಸಬೇಕು ಎಂದು ಕರೆ ಕೊಟ್ಟರು.

ಮತದಾನ ಚುರುಕು: ಲೋಕಸಭಾ ಚುನಾವಣೆಯ ಮತದಾನ‌ ಪ್ರಕ್ರಿಯೆ ಆರಂಭವಾಗಿದೆ. ಲ್ಯಾಮಿಂಗ್ಟನ್ ಶಾಲೆಯ ಮತಗಟ್ಟೆಯಲ್ಲಿ‌ ಅತ್ಯಂತ ಉತ್ಸುಕತೆಯಲ್ಲಿ ಮತದಾನ‌ ಪ್ರಕ್ರಿಯೆಯಲ್ಲಿ ನಡೆಯುತ್ತಿದೆ. ಈ ವೇಳೆ ಹಿರಿಯ‌ ಮತದಾರರು ಸರತಿ ಸಾಲಿನಲ್ಲಿ‌ ನಿಂತು ಮತದಾನ ಮಾಡುತ್ತಿರುವ ದೃಶ್ಯಗಳು ಕಂಡುಬರುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!