Wednesday, March 29, 2023

Latest Posts

ತಿರಂಗದಿಂದ ಶಾಂತಿ ಭಂಗವಾಗುತ್ತದೆ ಎಂದವರು ಇಂದು ಲಾಲ್‌ಚೌಕ್‌ನಲ್ಲಿ ತಿರಂಗ ಹಾರಿಸಿದ್ದಾರೆ: ಕಾಂಗ್ರೆಸ್ ಗೆ ತಿರುಗೇಟುಕೊಟ್ಟ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಂಸತ್ತಿನಲ್ಲಿ ರಾಷ್ಟ್ರಪತಿ ಭಾಷಣ ಮೇಲೆ ಅಭಿವಂದನಾ ಭಾಷಣ ಮಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳ ಟೀಕೆಗೆ ತಿರೇಗೇಟು ನೀಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಕುರಿತು ಚರ್ಚೆಯಾಗಿತ್ತು. ಇತ್ತೀಚೆಗೆ ನಾಯಕರು ಜಮ್ಮು ಮತ್ತು ಕಾಶ್ಮೀರ ತೆರಳಿದ್ದರು. ಲಾಲ್‌ಚೌಕ್ ಕಾಶ್ಮೀರದಲ್ಲಿ ತಿರಂಗ ಹಿಡಿದು ಯಾತ್ರೆ ಮಾಡಿದ್ದಾರೆ.
ಅದೆಷ್ಟು ಬದಲಾಗಿದೆ ಅನ್ನೋದು ಕಣ್ಣಾರೆ ನೋಡಿದ್ದಾರೆ .ಈ ವೇಳೆ ಭಾರತ್ ಜೋಡೋ ಯಾತ್ರೆ ಹಾಗೂ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ದಶಕಗಳ ಹಿಂದೆ ನಾನು ಕಾಶ್ಮೀರ ಸಂಚಾರ ಮಾಡಿದೆ. ಈ ವೇಳೆ ಭಯೋತ್ಪಾದಕರು ಪೋಸ್ಟರ್ ಹಾಕಿದ್ದರು. ತಾಯಿ ಹಾಲು ಕುಡಿದವರು ಕಾಶ್ಮೀರದಲ್ಲಿ ತಿರಂಗ ಹಾರಿಸಿ ಎಂದು ಸವಾಲು ಹಾಕಿದ್ದರು. ಅಂದು ನಾನು ಹೇಳಿದ್ದೆ 26ರ ಜನವರಿ 11 ಗಂಟೆಗೆ ಲಾಲ್ ಚೌಕ್‌ಗೆ ಬರುತ್ತೇನೆ. ಯಾವುದೇ ಸೆಕ್ಯೂರಿಟಿ ಇಲ್ಲದೆ, ಯಾವುದೇ ಬುಲೆಟ್ ಫ್ರೂಫ್ ಜಾಕೆಟ್ ಇಲ್ಲದೆ ಬರುತ್ತೇನೆ. ಅಲ್ಲಿ ನಿರ್ಧಾರವಾಗಲಿ ಯಾರು ಯಾರು ತಾಯಿ ಹಾಲು ಕುಡಿದ್ದಾರೆ ಅನ್ನೋದು ಎಂದಿದ್ದೆ. ನಾನು ಹೋಗಿ ಲಾಲ್ ಚೌಕ್‌ನಲ್ಲಿ ತಿರಂಗ ಹಾರಿಸಿದ್ದೆ. ಇಂದು ಯಾವುದೇ ಅಳುಕಿಲ್ಲದೆ ಕಾಶ್ಮೀರಕ್ಕೆ ತೆರಳಬಹುದು. ತಿರಂಗ ಹಾರಿಸಬಹುದು. ಯಾರು ಸವಾಲು ಹಾಕಲ್ಲ. ಆತಂಕ ಇಲ್ಲ ಎಂದು ಮೋದಿ ಹೇಳಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಮನೆ ಮನೆಯಲ್ಲಿ ಇಂದು ತಿರಂಗ ಹಾರಾಡುತ್ತಿದೆ. ಈ ಹಿಂದೆ ತಿರಂಗದಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಭಂಗವಾಗುತ್ತದೆ ಎಂದಿದ್ದರು. ಅಂದು ಈ ಮಾತು ಹೇಳಿದ್ದವರು ಇಂದು ತಿರಂಗ ಯಾತ್ರೆ ಜಮ್ಮು ಕಾಶ್ಮೀರದಲ್ಲಿ ಮಾಡುತ್ತಿದ್ದಾರೆ ಎಂದು ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಇದೀಗ ಶ್ರೀನಗರಲ್ಲಿ ಚಿತ್ರಮಂದಿರ ಹೌಸ್‌ಫುಲ್ ಆಗುತ್ತಿದೆ. ಆತಂಕವಾದಿ, ಭಯೋತ್ಪಾದನೆಯನ್ನು ಹತ್ತಿಕ್ಕಲಾಗಿದೆ ಎಂದು ಮೋದಿ ಹೇಳಿದರು.

ಕೆಲವರು ಈಶಾನ್ಯ ರಾಜ್ಯಗಳ ಕುರಿತು ಮಾತನಾಡಿದ್ದಾರೆ. ನಾನು ಮನವಿ ಮಾಡುತ್ತೇನೆ. ಒಮ್ಮೆ ಈಶಾನ್ಯ ರಾಜ್ಯಗಳಿಗೆ ಭೇಟಿ ನೀಡಿ. ನೀವು ನೋಡಿದ ಈಶಾನ್ಯ ರಾಜ್ಯ ಸಂಪೂರ್ಣ ಬದಲಾಗಿದೆ ಎಂದರು. ರೈಲು, ರಸ್ತೆ, ವಿಮಾನಯಾನ ಎಲ್ಲ ಸಂಪರ್ಕ ಎಲ್ಲಾ ಪ್ರದೇಶಕ್ಕೆ ಸಿಗುತ್ತಿದೆ. ತ್ರಿಪುರಾದಲ್ಲಿ ಅಭಿವೃದ್ಧಿ ವೇಗ ತ್ವರಿತಗತಿಯಲ್ಲಿ ಸಾಗುತ್ತಿದೆ ಎಂದು ಮೋದಿ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!