ಗೂಗಲ್‌, ಅಮೆಜಾನ್‌, ಮೆಟಾ ದಾರಿ ಹಿಡಿದ ಇಬೇ: 500 ಉದ್ಯೋಗಿಗಳ ವಜಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇ-ಕಾಮರ್ಸ್‌ ವಲಯ ಇಬೇ ಕಂಪನಿ 500 ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ.

ಈಗಾಗಲೇ ಸಾಮೂಹಿಕ ಉದ್ಯೋಗ ಕಡಿತವನ್ನು ಅನೇಕ ಕಂಪೆನಿಗಳು ಘೋಷಿಸಿದ್ದು, ಇದೀಗ ಕಳೆದ ಕೆಲವು ತಿಂಗಳುಗಳಲ್ಲಿ ಜಾಗತಿಕ ಆರ್ಥಿಕ ಬಿಕ್ಕಟ್ಟು ಉಂಟಾಗಿರುವ ಹಿನ್ನೆಲೆಯಲ್ಲಿ ಉದ್ಯೋಗ ಕಡಿತ ಅನಿವಾರ್ಯವಾಗಿದೆ ಎಂದು ಇಬೇ ಸಿಇಒ ಜ್ಯಾಮಿ ಲ್ಯಾನೋನ್‌ ತಿಳಿಸಿದ್ದಾರೆ.

ಈ ಉದ್ಯೋಗ ಕಡಿತದಿಂದ ಇಬೇಗೆ ತನ್ನ ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.
ಉದ್ಯೋಗ ಕಡಿತದ ಘೋಷಣೆಯ ಬಳಿಕ ಷೇರು ಮಾರುಕಟ್ಟೆಯಲ್ಲಿ ಕಂಪನಿಯ ಷೇರು ದರ ಚೇತರಿಸಿತು. ಝೂಮ್‌ ಕಂಪನಿ ಇತ್ತೀಚೆಗೆ 1,300 ಉದ್ಯೋಗ ಕಡಿತವನ್ನು ಪ್ರಕಟಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!