ಮನೆಯಲ್ಲೇ ಇದ್ದರು ಕಳ್ಳರು: ನಟಿ ಸೋನಂ ಕಪೂರ್​ ನಿವಾಸದಿಂದ ಕೋಟಿ ಕೋಟಿ ಕದ್ದವರು ಅರೆಸ್ಟ್!​

ಹೊಸದಿಗಂತ ಡಿಜಟಲ್‌ ಡೆಸ್ಕ್

ಬಾಲಿವುಡ್​ ನಟಿ ಸೋನಂ ಕಪೂರ್​ ಮತ್ತು ಉದ್ಯಮಿ ಆನಂದ್​ ಅಹುಜಾ ಅವರ ಮನೆಯಲ್ಲಿ ಫೆಬ್ರವರಿ ತಿಂಗಳಲ್ಲಿ 2.4 ಕೋಟಿ ನಗದು ಮತ್ತು ಚಿನ್ನಾಭರಣ ಕಳವು ಆಗಿತ್ತು.
ಇದೀಗ ತನಿಖೆ ವೇಳೆ ಕಳ್ಳರು ಸಿಕ್ಕಿ ಬಿದ್ದಿದ್ದಾರೆ.ಇವರ ಮನೆಯಲ್ಲಿ ನರ್ಸ್​ ಆಗಿದ್ದ ಅಪರ್ಣಾ ವಿಲ್ಸನ್ ಹಾಗೂ ಅವಳ ಗಂಡ ನರೇಶ್ ಕುಮಾರ್ ಈ ಕಳ್ಳತನ ಮಾಡಿದ್ದರು. ಅವರು ಈಗ ಜೈಲು ಪಾಲಾಗಿದ್ದಾರೆ.
ನಟಿ ಸೋನಂ ಕಪೂರ್ ಅತ್ತೆಯನ್ನು ನೋಡಿಕೊಳ್ಳುತ್ತಿದ್ದ ನರ್ಸ್ ಅಪರ್ಣ ರೌತ್ ವಿಲ್ಸನ್ ಹಾಗೂ ಆಕೆಯ ಪತಿ ನರೇಶ್ ಕುಮಾರ್ ಸಾಗರ್ ಈ ಕಳ್ಳತನ ಮಾಡಿದ್ದು, ಇದೀಗ ಅವರನ್ನು ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರಕರಣದ ವಿವರ:
ಫೆಬ್ರವರಿ 11ರಂದು ನಟಿ ಸೋನಂ ಕಪೂರ್ ಮತ್ತು ಆನಂದ್ ಅಹುಜಾ ಅವರ ದೆಹಲಿ ನಿವಾಸದಲ್ಲಿ ₹2.4 ಕೋಟಿ ನಗದು ಮತ್ತು ಆಭರಣಗಳನ್ನು ದರೋಡೆ ಮಾಡಲಾಗಿತ್ತು. ಘಟನೆ ನಡೆದ 2 ವಾರಗಳ ನಂತರ ಇದು ನಟಿಯ ಮನೆಯವರ ಗಮನಕ್ಕೆ ಬಂದಿತ್ತು. ಬಳಿಕ ಫೆಬ್ರವರಿ 23ರಂದು ಪೊಲೀಸ್​ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ಕುರಿತಂತೆ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ಕೆಲ ತಂಡ ರಚನೆ ಮಾಡಿ, ತನಿಖೆ ಆರಂಭಿಸಿದ್ದರು. ಮನೆಯಲ್ಲಿ ಸೆಕ್ಯೂಟಿರಿ ಗಾರ್ಡ್​​, ಸಿಸಿಟಿವಿ ಇರುವಾಗ ಕಳ್ಳತನ ಮಾಡಲು ಹೇಗೆ ಸಾಧ್ಯ? ಎಂಬ ತಲೆನೋವು ಪೊಲೀಸರಿಗೆ ಶುರುವಾಗಿತ್ತು. ಈ ವೇಳೆ ಮನೆಯವರನ್ನು ವಿಚಾರಣೆಗೊಳಪಡಿಸಿದಾಗ ಸೋನಂ ಕಪೂರ್ ಅತ್ತೆಯನ್ನು ನೋಡಿಕೊಳ್ಳುತ್ತಿದ್ದ ನರ್ಸ್ ಅಪರ್ಣ ರೌತ್​ ಕೈವಾಡ ಇದರಲ್ಲಿ ಇರುವುದು ಗೊತ್ತಾಗಿದೆ. ಇದೀಗ ಅವರನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರುವಿಚಾರಣೆಗೊಳಪಡಿಸಿದ್ದಾರೆಂದು ತಿಳಿದು ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!