ಖಲಿಸ್ಥಾನಿ ಭಯೋತ್ಪಾದಕರಿಂದ ಕೇಜ್ರೀವಾಲ್‌ಗೆ ಬೆದರಿಕೆ: ಪಂಜಾಬ್‌ ಪೋಲೀಸರಿಂದ ದೆಹಲಿ ಪೋಲೀಸರಿಗೆ ಪತ್ರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರೀವಾಲ್‌ ಗೆ ಖಲಿಸ್ತಾನಿ ಭಯೋತ್ಪಾದಕ ಶಕ್ತಿಗಳಿಂದ ಬೆದರಿಕೆ ಇದೆ ಎಂದು ಪಂಜಾಬ್‌ ಪೋಲೀಸರು ದೆಹಲಿ ಪೋಲೀಸರಿಗೆ ಪತ್ರ ಬರೆದಿದ್ದಾರೆ. ಆದರೆ ದೆಹಲಿ ಪೋಲೀಸರು ಇದನ್ನು ತಿರಸ್ಕರಿಸಿದ್ದಾರೆ.

ಇತ್ತೀಚೆಗೆ ಖಲಿಸ್ತಾನಿ ಶಕ್ತಿಗಳ ಉಪಟಳ ಜಾಸ್ತಿಯಾಗುತ್ತಿದೆ, ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಗೆ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಅವರಿಗೆ ಹೆಚ್ಚಿನ ಭದ್ರತೆ ಒದಗಿಸುವಂತೆ ಪಂಜಾಬ್‌ ಪೋಲೀಸರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.  ಆದರೆ ದೆಹಲಿ ಪೋಲೀಸರು ಇದನ್ನು ನಿರಾಕರಿಸಿದ್ದು “ಕೇಂದ್ರ ಗೃಹ ಸಚಿವಾಲಯವು ಮಂಜೂರು ಮಾಡಿರುವ ಝಡ್ ಪ್ಲಸ್ ವರ್ಗದ ಅಡಿಯಲ್ಲಿ ಕೇಜ್ರಿವಾಲ್ ಈಗಾಗಲೇ ಅತ್ಯುನ್ನತ ಮಟ್ಟದ ಭದ್ರತೆಯನ್ನು ಹೊಂದಿದ್ದಾರೆ. ಈ ಕುರಿತು ಪಂಜಾಬ್‌ ಪೋಲೀಸರಿಗೆ ಯಾವುದೇ ಗುಪ್ತಚರ ಮಾಹಿತಿ ಲಭ್ಯವಿದ್ರೆ ಅದನ್ನು ಕೇಂದ್ರ ಗೃಹಸಚಿವಾಲಯ ಮತ್ತು ದೆಹಲಿ ಪೋಲೀಸರೊಂದಿಗೆ ಹಂಚಿಕೊಂಡು ಮೌಲ್ಯಮಾಪನ ನಡೆಸಬೇಕು” ಎಂದು ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!