ಮಾಡಿನೋಡಿ ಕಾಡುಮಾವಿನ ಹಣ್ಣಿನ ಶರಬತ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇದು ಮಾವಿನ ಹಣ್ಣಿನ ಸೀಸನ್. ಕಾಡು ಮಾವು ಎಲ್ಲೆಡೆ ಲಭ್ಯ. ಹಳ್ಳಿಗಳಲ್ಲಂತೂ ಮಾವಿನದ್ದೇ ಕಾರುಬಾರು!. ಮಾವಿನ ಮರದ ಕೆಳಗೆ ಬಿದ್ದ ಹಣ್ಣುಗಳನ್ನು ಹೆಕ್ಕಿ ತಿನ್ನುವುದೇ ಒಂದು ಮಜಾ. ಈ ಮಾವಿನ ಹಣ್ಣಿನ ಶರಬತ್ ಅತ್ಯಂತ ರುಚಿಕರ ಪೇಯ.

ಬೇಕಾಗುವ ಸಾಮಗ್ರಿ

ಕಾಡು ಮಾವಿನ ಹಣ್ಣಿನ ರಸ ಎರಡು ಲೋಟ

ಸಕ್ಕರೆ ಆರು ಲೋಟ

ನೀರು ಒಂದು ಲೋಟ

ಸ್ವಲ್ಪ ಉಪ್ಪು

ಮಾಡುವ ವಿಧಾನ:

ಕಾಡು ಮಾವಿನ ಹಣ್ಣನ್ನು ಚೆನ್ನಾಗಿ ನೀರಿನಲ್ಲಿ ತೊಳೆದು ಶುಚಿಗೊಳಿಸಿ. ತೊಟ್ಟಿನ ಭಾಗವನ್ನು ಕತ್ತರಿಸಿ. ಸಿಪ್ಪೆ, ವಾಟೆಗಳನ್ನು ಬೇರ್ಪಡಿಸಿ ಕಿವಿಚಿ ರಸ ಬೇರ್ಪಡಿಸಿ. ತಿರುಳಿನ ಭಾಗವನ್ನು ಒಂದು ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಕಿವುಚಿ ರಸ ತೆಗೆಯಿರಿ. ಇನ್ನೊಂದು ಪಾತ್ರೆಯಲ್ಲಿ ಸಕ್ಕರೆ, ಸ್ವಲ್ಪ ಉಪ್ಪು, ನೀರು ಸೇರಿಸಿ ಒಲೆಯಲ್ಲಿಟ್ಟು ಕಲೆಸಿಕೊಳ್ಳಿ. ಚೆನ್ನಾಗಿ ಕುದಿದು ನಾರು ಪಾಕ ಬಂದ ಮೇಲೆ ಮಾವಿನ ಹಣ್ಣಿನ ರಸವನ್ನು ಅದರೊಂದಿಗೆ ಹಾಕಿ ಸರಿಯಾಗಿ ಕುದಿಸಿರಿ. ಪಾತ್ರೆಯನ್ನು ಕೆಳಗಿರಿಸಿ ತಣ್ಣಗಾದ ಮೇಲೆ ಗಾಜಿನ ಜಾಡಿಯಲ್ಲಿ ತುಂಬಿಡಿ. ತಣ್ಣನೆಯ ಒಂದು ಲೋಟ ನೀರಿಗೆ ಒಂದು ಚಮಚ ಸೇರಿಸಿ ಕುಡಿಯಿರಿ…ರುಚಿಕರ ಮಾವಿನ ಹಣ್ಣಿನ ಶರಬತ್ ರೆಡಿ!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!