ಮತ್ತೆ ಮತ್ತೆ ಬಂತು ವಿಮಾನಗಳಿಗೆ ಬೆದರಿಕೆ: ಭಾನುವಾರವೂ 50 ಏರ್ ಲೈನ್ಸ್ ಗೆ ಹುಸಿ ಬಾಂಬ್ ಬೆದರಿಕೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ದೇಶದಲ್ಲಿ ಮತ್ತೆ ಮತ್ತೆ ವಿಮಾನಗಳಿಗೆ ಬೆದರಿಕೆಗಳು ಬರುತ್ತಿದ್ದು, ಇಂದು ಕೂಡ 50 ವಿಮಾನಗಳಿಗೆ ಬಾಂಬ್ ಬೆದರಿಕೆಗಳು ಬಂದಿವೆ ಎಂದು ಮೂಲಗಳು ತಿಳಿಸಿವೆ. 14 ದಿನಗಳಲ್ಲಿ ಭಾರತೀಯ ವಿಮಾನಯಾನ ಸಂಸ್ಥೆಗಳು ನಿರ್ವಹಿಸುವ 350 ಕ್ಕೂ ಹೆಚ್ಚು ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆಗಳು ಬಂದಿವೆ.

15 ವಿಮಾನಗಳಿಗೆ ಇಂತಹ ಬೆದರಿಕೆ ಬಂದ ನಂತರ ಸಂಪೂರ್ಣ ತಪಾಸಣೆ ನಡೆಸಲಾಯಿತು. ಬಳಿಕ ಎಲ್ಲಾ ವಿಮಾನಗಳು ಹಾರಾಟ ಆರಂಭಿಸಿವೆ ಎಂದು ಆಕಾಶ ಏರ್ ಭಾನುವಾರ ತಿಳಿಸಿದೆ.

ಇಂಡಿಗೋ 18 ವಿಮಾನಗಳಿಗೆ ಮತ್ತು ವಿಸ್ತಾರಾ 17 ವಿಮಾನಗಳಿಗೆ ಬೆದರಿಕೆಗಳು ಬಂದಿವೆ ಎನ್ನಲಾಗಿದೆ. ವಿಮಾನಯಾನ ಸಂಸ್ಥೆಗಳಿಗೆ ಸರಣಿ ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಐಟಿ ನಿಯಮಗಳಡಿ ತಪ್ಪು ಮಾಹಿತಿಯನ್ನು ತ್ವರಿತವಾಗಿ ತೆಗೆದುಹಾಕಲು ಅಥವಾ ನಿಷ್ಕ್ರಿಯಗೊಳಿಸಲು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಗೆ ITಸಚಿವಾಲಯ ಸೂಚಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!