May 11, 2026
Monday, May 11, 2026
spot_img

ಬೈಕ್‌ ಸ್ಟಂಟ್‌ ಮಾಡೋಕೆ ಹೋಗಿ ಪ್ರಾಣಬಿಟ್ಟ ಮೂವರು ಸಹೋದರರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೈಯಲ್ಲಿ ಗನ್‌ ಲೈಟರ್‌ , ಮತ್ತೊಂದು ಕೈಯಲ್ಲಿ ಫೋನ್‌ ಹಿಡಿದುಕೊಂಡು ತ್ರಿಬಲ್‌ ರೈಡಿಂಗ್‌ನಲ್ಲಿ ರೀಲ್ಸ್‌ ಮಾಡುತ್ತಿದ್ದ ಮೂವರು ಸಹೋದರರು ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ.

ಮಧ್ಯಪ್ರದೇಶದ ರೇವಾ ಜಿಲ್ಲೆಯ ಮೌಗಂಜ್‌ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಮೂವರು ಸಹೋದರರು ಪಲ್ಸರ್‌ ಬೈಕ್‌ನಲ್ಲಿ ಸ್ಪೀಡಾಗಿ ಹೋಗುತ್ತಿದ್ದರು. ಇದರ ಜೊತೆ ಬೈಕ್‌ ಸ್ಟಂಟ್‌ ಮಾಡುತ್ತಾ ರೀಲ್ಸ್‌ ಮಾಡುತ್ತಿದ್ದರು. ಆದರೆ ಮುಂದೆ ಇನ್ನೊಂದು ವಾಹನ ನಿಂತಿದ್ದನ್ನು ನೋಡದೇ ಸೀದ ಅದಕ್ಕೆ ಡಿಕ್ಕಿ ಹೊಡೆದಿದ್ದಾರೆ.

ಅತಿಯಾದ ವೇಗದಲ್ಲಿದ್ದ ಕಾರಣ ಉಪಲಕ್ಷ್ಯ, ಅಮರೀಷ್‌ ಹಾಗೂ ಹೇಮರಾಜ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂವರು ಮಕ್ಕಳನ್ನು ಒಂದೇ ಬಾರಿ ಕಳೆದುಕೊಂಡ ಪೋಷಕರು ಕಣ್ಣೀರಿನಲ್ಲಿಯೇ ಕೈತೊಳೆಯುವಂತಾಗಿದೆ.

ಈ ರೀತಿ ಅಪಾಯಕಾರಿ ಸ್ಟಂಟ್‌ಗಳನ್ನು ಮಾಡುವುದು ಉಚಿತವಲ್ಲ. ನಿಮ್ಮ ಮುಂದೆ ಇಡೀ ಜೀವನವಿದೆ. ನಿಮ್ಮ ಜೀವನದ ಬಗ್ಗೆ ಮನೆಯಲ್ಲಿ ಕೂತು ಕನಸು ಕಾಣುವ ಪೋಷಕರಿದ್ದಾರೆ. ಸಾಮಾಜಿಕ ಜಾಲತಾಣ ಹಾಗೂ ರೀಲ್ಸ್‌ ಹುಚ್ಚಿಗೆ ಪ್ರಾಣ ಪಣಕ್ಕೆ ಇಡಬೇಡಿ. ಇಂಥಹ ಅಪಾಯಕಾರಿ ಸ್ಟಂಟ್ಸ್‌ ಮಾಡುವ ಮುನ್ನ ಒಂದು ಬಾರಿ ಯೋಚಿಸಿ. ನಿಮ್ಮ ಪ್ರಾಣ ಉಳಿಸಿಕೊಳ್ಳಿ..

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !