Sunday, June 4, 2023

Latest Posts

ಧಾರವಾಡ| ಮೂರು ಕ್ಷೇತ್ರ ಕಮಲ, ನಾಲ್ಕು’ಕೈ’ಪಾಲು!

ಹೊಸದಿಗಂತ ವರದಿ ಧಾರವಾಡ:

ಕರ್ನಾಟಕ ವಿಧಾನಸಭೆಯ ಚುನಾವಣೆಯಲ್ಲಿ ಧಾರವಾಡ ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರದಲ್ಲಿ ಕಮಲ ಅರಳಿದೆ. ಇನ್ನುಳಿದ ನಾಲ್ಕು ಕ್ಷೇತ್ರಗಳು ‘ಕೈ’ ಪಾಲಾಗಿದೆ.

ಕಾಂಗ್ರೆಸ್ ಅಭ್ಯರ್ಥಿಗಳಾದ ವಿನಯ್ ಕುಲಕರ್ಣಿ(ಧಾರವಾಡ), ಪ್ರಸಾದ ಅಬ್ಬಯ್ಯ (ಹು-ಧಾ ಪೂರ್ವ) ಸಂತೋಷ ಲಾಡ್ (ಕಲಘಟಗಿ) ಹಾಗೂ ಎನ್.ಎಚ್.ಕೋನರೆಡ್ಡಿ (ನವಲಗುಂದ) ಗೆಲವು ಸಾಧಿಸಿದ್ದಾರೆ.

ಇನ್ನೂ ಇಡೀ ದೇಶದ ಗಮನ ಸೆಳೆದ ಹು-ಧಾ ಸೆಂಟ್ರಲ್ ಕ್ಷೇತ್ರದಲ್ಲಿ ಕೈ ಅಭ್ಯರ್ಥಿ ಮಾಜಿ ಸಿಎಂ ಜಗದೀಶ ಶೆಟ್ಟರ್ ಮಹೇಶ ತೆಂಗಿನಕಾಯಿ ಭರ್ಜರಿ ಗೆಲವು ದಾಖಲಿಸಿದ್ದು, ಶೆಟ್ಟರ್ ಗೆ ತೀವ್ರ ಮುಖಭಂಗವಾಗಿದೆ.

ಹು-ಧಾ ಪಶ್ಚಿಮದಲ್ಲಿ ಬಿಜೆಪಿಯ ಅರವಿಂದ ಬೆಲ್ಲದ ಹಾಗೂ ಕುಂದಗೋಳ ಕ್ಷೇತ್ರದಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ ಬಿಜೆಪಿ ಅಭ್ಯರ್ಥಿ ಎಂ.ಆರ್. ಪಾಟೀಲ ಗೆಲುವಿನ ನಗೆ ಬೀರಿದ್ದಾರೆ.

ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಅಭ್ಯರ್ಥಿಗಳ ಗೆಲವು ಖಚಿತವಾದ ಕೂಡಲೇ, ಉಭಯ ಪಕ್ಷಗಳ ಬೆಂಲಿಗರು, ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಪರಸ್ಪರ ಗುಲಾಲ್ ಎರೆಚಿ, ಸಿಹಿ ತಿನಿಸಿ ಸಂಭ್ರಮಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!