ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರದ ಗೋಪಾಲ್‌ಗಂಜ್‌ನ ಗಂಡಕ್ ನದಿಯಲ್ಲಿ ದೋಣಿ ಮುಳುಗಿದ್ದು ಮೂವರು ಮೃತಪಟ್ಟಿದ್ದಾರೆ.
ದೋಣಿ ಮುಳುಗಿ 21 ಮಂದಿ ಕಾಣೆಯಾಗಿದ್ದು, ಪತ್ತೆಗಾಗಿ ಶೋಧಕಾರ್ಯ ನಡೆಯುತ್ತಿದೆ.
ಬೆಟ್ಟಿಯಾ-ಗೋಪಾಲ್‌ಗಂಜ್ ಗಡಿಯಲ್ಲಿರುವ ಭಗವಾನ್‌ಪುರ ಗ್ರಾಮದ ಬಳಿಯ ಗಂಡಕ್ ನದಿಯಲ್ಲಿ ದುರಂತ ಸಂಭವಿಸಿದೆ. ದೋಣಿಯಲ್ಲಿ ಕುಚಯ್‌ಕೋಟ್ ಮತ್ತು ವಿಷಂಭರಪುರದ ರೈತರಿದ್ದರು ಎನ್ನುವ ಮಾಹಿತಿ ದೊರಕಿದೆ.