ಮುಕ್ಕಣ್ಣ ಶಿವನಂತೆ ಜನಿಸಿತು ಈ ಕರು, ಗ್ರಾಮಸ್ಥರಿಂದ ಪೂಜೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಹಿಂದು ಧರ್ಮದಲ್ಲಿ ಹಸುವನ್ನು ಕಲ್ಪತರು ಎಂದು ಪೂಜಿಸುತ್ತೇವೆ. ಅದಕ್ಕೆ ಮತ್ತೊಂದು ಸಾಕ್ಷಿ ಎಂಬಂತೆ ಮೂರು ಕಣ್ಣುಗಳಿರುವ ಕರು ಜನ್ಮ ತಾಳಿದೆ.
ಛತ್ತೀಸ್‌ ಗಢದ ರಾಜ್‌ ನಂದಗಾಂವ್‌ ಜಿಲ್ಲೆಯಲ್ಲಿ ಈ ಕರು ಜನಿಸಿದೆ.
ಈ ಕರು ಮೂರು ಕಣ್ಣುಗಳು ಹಾಗೂ ಮೂಗಿನಲ್ಲಿ ನಾಲ್ಕು ಹೊರಳೆಗಳೊಂದಿಗೆ ಜನಿಸಿದೆ. ಇದನ್ನು ಕಂಡ ಗ್ರಾಮಸ್ಥರು ಇದು ಶಿವನ ಅವತಾರ ಎಂದು ಪೂಜಿಸಿದ್ದಾರೆ.
ಈ ಬಗ್ಗೆ ಎಎನ್‌ ಐ ಮಾಹಿತಿ ನೀಡಿದ್ದು, ರಾಜ್‌ ನಂದಗಾಂವ್‌ ಜಿಲ್ಲೆಯ ಲೂಧಿ ನವಗಾಂವ್‌ ಎಂಬ ಹಳ್ಳಿಯ ಹೇಮಂತ್‌ ಚಾಂಡೆಲ್‌ ಎಂಬ ರೈತರ ಮನೆಯಲ್ಲಿ ಈ ಕರು ಜನನವಾಗಿದೆ. ಇದು ಮಕರ ಸಂಕ್ರಮಣದ ದಿನದಂದು ಹುಟ್ಟಿದ್ದು, ಹಸು ಹಾಗು ಕರು ಎರಡೂ ಆರೋಗ್ಯವಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ವರದಿ ಮಾಡಿದೆ.
ಇದನ್ನು ನೋಡಲು ಬಂದ ಸುತ್ತಮುತ್ತಲಿನ ಜನ ಹಣ್ಣು, ಕಾಯಿ, ಹೂವು ತಂದು ಪೂಜಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!