ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋವಿಡ್ ಸೋಂಕು ಹೆಚ್ಚು ಅಥವಾ ಕಡಿಮೆ ಆದಾಗ ನಿರ್ಬಂಧಗಳನ್ನು ಇನ್ನೂ ಹೆಚ್ಚು ಬಿಗಿ ಅಥವಾ ಸಡಿಲ ಮಾಡಬಹುದು, ಆದರೆ ಲಾಕ್‌ಡೌನ್ ಮಾಡುವ ವಿಚಾರ ನಮ್ಮ ಮುಂದೆ ಇಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಇಂದು ಸಂಜೆ ಸಿಎಂ ಜತೆ ಸಭೆ ನಡೆಸಲಾಗುವುದು, ಸಭೆಯಲ್ಲಿ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ನಿರಾಳವಾಗಿರುವಷ್ಟು ಕಡಿಮೆ ಕೇಸ್‌ಗಳು ಬರುತ್ತಿಲ್ಲ. ಮುಂದಿನ ಕ್ರಮದ ಬಗ್ಗೆ ಮಾತನಾಡುತ್ತೇವೆ ಎಂದಿದ್ದಾರೆ.
ಕೋವಿಡ್ ಹೆಚ್ಚಳ ಆಗುತ್ತಿದೆ. ಹೊಟೇಲ್ ಮಾಲಿಕರಿಗೆ ಇನ್ನೂ ಸುಮಾರು ಮಂದಿಗೆ ವೀಕೆಂಡ್ ಕರ್ಫ್ಯೂನಿಂದ ಕಷ್ಟವಾಗುತ್ತಿದೆ. ಜನರನ್ನು ಕಷ್ಟಕ್ಕೆ ದೂಡುವುದು ನಮ್ಮ ಉದ್ದೇಶ ಅಲ್ಲ. ತಜ್ಞರ ಸಲಹೆಯಂತೆ ನಾವು ನಡೆದುಕೊಳ್ಳುತ್ತೇವೆ ಎಂದಿದ್ದಾರೆ.