ವಿಶ್ವವೇ ನಾಚುವಂತೆ ಅಭಿವೃದ್ಧಿಗೊಳ್ಳುತ್ತಿದೆ ದೇಶದ ಮೂರು ರೈಲು ನಿಲ್ದಾಣಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:‌

ಭಾರತ ಆದುನಿಕ ಯುಗದಲ್ಲಿ ಅಭಿವೃದ್ಧಿಯ ವೇಗ ಪಡೆಯುತ್ತಿದೆ. ಕೇಂದ್ರ ಸರಕಾರದ ಹೊಸ ಹೊಸ ಯೋಜನೆಗಳು ಇಂದು ವಿಶ್ವದ ಗಮನಸೆಳೆಯುತ್ತಿದೆ. ಇದೀಗ ಈ ಹಾದಿಗೆ ಇನ್ನೊಂದು ಯೋಜನೆ ಸೇರುತ್ತಿದ್ದು, ಅದುವೇ ದೇಶದ ರೈಲು ನಿಲ್ದಾಣಗಳ ಉನ್ನತೀಕರಣ.

ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಹೊಸ ಇತಿಹಾಸ ರಚಿಸಿದೆ. ಸಾರಿಗೆ ಸಂಪರ್ಕವನ್ನು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವಿಶ್ವದರ್ಜೆ ಮಟ್ಟದ ಮೂಲಭೂತ ಸೌಕರ್ಯ ಒದಗಿಸುತ್ತಿದೆ. ಇದರ ಪರಿಣಾಮ ಭಾರತದ ರೈಲು ನಿಲ್ದಾಣಗಳ ಉನ್ನತೀಕರಣ ಕೆಲಸಗಳು ಭರದಿಂದ ಸಾಗುತ್ತಿದೆ. ಇದೀಗ ಅಹಮ್ಮದಾಬಾದ್, ಮುಂಬೈ ಹಾಗೂ ದೆಹಲಿ ರೈಲು ನಿಲ್ದಾಣದ ಈ ಸರದಿಗೆ ಸೇರುತ್ತಿದೆ.

ಒಟ್ಟು 10,000 ಕೋಟಿ ರೂಪಾಯಿ ವೆಚ್ಚದಲ್ಲಿ ದೆಹಲಿ, ಅಹಮ್ಮದಾಬಾದ್ ಹಾಗೂ ಮುಂಬೈ ರೈಲು ನಿಲ್ದಾಣ ನವೀಕರಣಗೊಳ್ಳಲಿದೆ. ಅಹಮ್ಮದಾಬಾದ್ ರೈಲು ನಿಲ್ದಾಣ ಅತ್ಯಾಧುನೀಕರಣ ಹಾಗೂ ಸುಸಜ್ಜಿತ ಮೂಲಭೂತ ಸೌಕರ್ಯ ಹೊಂದಲಿದೆ.

15 ಏಕರೆ ಪ್ರದೇಶದಲ್ಲಿ ಅಹಮ್ಮದಾಬಾದ್ ರೈಲು ನಿಲ್ದಾಣ ನವೀಕರಣಗೊಳ್ಳುತ್ತಿದೆ. ಎಲ್ಲಾ ಸೌಲಭ್ಯಗಳನ್ನು ಹೊಂದಿರಲಿದೆ. ಇದರ ಜೊತೆಗೆ ಉದ್ಯೋಗವಕಾಶಗಳ ಸೃಷ್ಟಿಯಾಗುತ್ತಿದೆ.


ದೆಹಲಿಯಲ್ಲಿ ನವೀಕರಣಗೊಳ್ಳುತ್ತಿರುವ ರೈಲು ನಿಲ್ದಾಣ 15 ಏಕರೆ ಪ್ರದೇಶದಲ್ಲಿ ಸುಸಜ್ಜಿತವಾಗಿ ತಲೆ ಎತ್ತಲಿದೆ. ಕಾಂಪ್ಲೆಕ್ಸ್, ಪ್ಲಾಟ್‌ಪಾರ್ಮ್, ಲಾಂಜ್ ಸೇರಿದಂತೆ ಎಲ್ಲಾ ಸೌಲಭ್ಯಗಳು ಈ ನಿಲ್ದಾಣದಲ್ಲಿ ಇರಲಿದೆ.

ದೆಹಲಿ ರೈಲು ನಿಲ್ದಾಣದಿಂದ ನೇರವಾಗಿ ಸಿಟಿ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಾಗುತ್ತದೆ. ಸಾರಿಗೆ ಸಂಪರ್ಕ ಎಲ್ಲಾ ಒಂದೇ ಸ್ಥಳದಲ್ಲಿ ಲಭ್ಯವಾಗಲಿದೆ. ಇದರಿಂದ ಪ್ರಯಾಣಿಕರ ಅನೂಕೂಲ ಹೆಚ್ಚಾಗಲಿದೆ.

ಮುಂಬೈ ರೈಲು ನಿಲ್ದಾಣ 5 ಏಕರೆ ಪ್ರದೇಶದಲ್ಲಿ ನವೀಕರಣಗೊಳ್ಳುತ್ತಿದೆ. ಚತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ ಹೊಸ ರೂಪ ಪಡೆದುಕೊಳ್ಳಲಿದೆ. ಅತ್ಯಾಧುನಿಕ ಸೌಲಭ್ಯ ಮುಂಬೈ ರೈಲು ನಿಲ್ದಾಣದಲ್ಲಿ ಲಭ್ಯವಾಗಲಿದೆ.

ಮುಂಬೈ, ಅಹಮ್ಮಾದಾಬಾದ್ ಹಾಗೂ ದೆಹಲಿ ರೈಲು ನಿಲ್ದಾಣ ನವೀಕರಣದಿಂದ 35,000 ಹೊಸ ಉದ್ಯೋಗಳು ಸೃಷ್ಟಿಯಾಗುತ್ತಿದೆ. ಈ ಮೂರು ನಿಲ್ದಾಣದಿಂದ ಪ್ರತಿನಿತ್ಯ 2 ಮಿಲಿಯನ್‌ಗೂ ಹೆಚ್ಚು ಪ್ರಯಾಣಿಕರ ಪ್ರಯಾಣ ಸುಖಕರವಾಗಲಿದೆ.

ಮೂರು ರೈಲು ನಿಲ್ದಾಣಕ್ಕೆ ನವೀಕರಣಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. 10,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ರೈಲು ನಿಲ್ದಾಣಗಳು ಹೊಸ ಅಧ್ಯಾಯ ಬರೆಯಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!