ಹೊಸದಿಗಂತ ಡಿಜಿಟಲ್ ಡೆಸ್ಕ್;
ಜಮ್ಮುವಿನ ಅಖ್ನೂರ್‌ನ ಬತಲ್ ಪ್ರದೇಶದಲ್ಲಿ ಮಿಲಿಟರಿ ವಾಹನದ ಮೇಲಿನ ದಾಳಿ ಬಳಿಕ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ
ಕಾರ್ಯಾಚರಣೆ ವೇಳೆ ಅಡಗಿದ್ದ ಭಯೋತ್ಪಾದಕರು ಸೇನೆ ವಿರುದ್ಧ ದಾಳಿಗೆ ಮುಂದಾಗಿದ್ದಾರೆ. ಈ ಸಂದರ್ಭ ಭಾರಿ ಗುಂಡಿನ ಚಕಮಕಿ ನಡೆದಿದ್ದು, ಮೂವರು ಭಯೋತ್ಪಾದಕರು ಹತರಾಗಿದ್ದಾರೆ.