ಹೊಸದಿಗಂತ ಡಿಜಿಟಲ್ ಡೆಸ್ಕ್;
ಕೇರಳದ ಗುರುವಾಯೂರು ದೇವಸ್ಥಾನದಲ್ಲಿ ಶ್ರೀಕೃಷ್ಣನಿಗೆ ಪ್ರಿಯವಾದ ʼತುಳಸಿ’ ಸಮರ್ಪಿಸುವುದನ್ನೇ ನಿಷೇಧಿಸಲಾಗಿದೆ.
ಗುರುವಾಯೂರು ದೇವಸ್ವಂ ಆಡಳಿತಾಧಿಕಾರಿ ಕೆ. ಪಿ. ವಿನಯನ್ ಈ ಕುರಿತು ಖಚಿತಪಡಿಸಿದ್ದು, ಕೇರಳದ ತ್ರಿಶ್ಶೂರ್ ಜಿಲ್ಲೆಯಲ್ಲಿರುವ ಗುರುವಾಯೂರು ಶ್ರೀಕೃಷ್ಣ ದೇಗುಲದಲ್ಲಿ ಸಮರ್ಪಣೆಗೆ ಎಂದು ಭಕ್ತರು ತಂದುಕೊಡುವ ತುಳಸಿಯನ್ನು ಪ್ರತ್ಯೇಕಿಸುವ ಕೆಲಸ ಮಾಡುವಾಗ ದೇವಾಲಯದ ಸಿಬ್ಬಂದಿಗೆ ಅಲರ್ಜಿ ಮತ್ತು ಇತರೆ ಆರೋಗ್ಯ ಸಮಸ್ಯೆಗಳಾಗಿವೆ. ಅನೇಕರ ಕೈ ಚರ್ಮಗಳು ಎದ್ದು ಹೋಗಿರುವ ಉದಾಹರಣೆಗಳೂ ಇವೆ. ಭಕ್ತರು ತರುವ ತುಳಸಿಯಲ್ಲಿ ಅತಿಯಾದ ಕೀಟನಾಶಕ ಇದ್ದು, ದೇಗುಲದ ಸಿಬಂದಿಗೆ ಅಲರ್ಜಿ-ತುರಿಕೆಯಂಥ ಸಮಸ್ಯೆಗಳಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಬಹುತೇಕ ಭಕ್ತರು ಅಂಗಡಿಗಳಿಂದ ತುಳಸಿ ತರುತ್ತಾರೆ. ವ್ಯಾಪಾರಸ್ಥರು ತುಳಸಿ ಹಾಳಾಗದಂತೆ ರಕ್ಷಿಸಲು ಹೆಚ್ಚಿನ ಕೀಟನಾಶಕ ಸಿಂಪಡಿಸಿರುತ್ತಾರೆ. ಹೀಗಾಗಿ ತುಳಸಿ ನಿಷೇಧಿಸಲಾಗಿದೆ.
ಆದ್ರೆ ದೇಗುಲಕ್ಕೆ ಅಗತ್ಯವಿರುವಷ್ಟು ಕೀಟನಾಶಕ ಸಿಂಪಡಿಸದಿರುವ ತುಳಸಿ ಖರೀದಿಗೆ ವ್ಯವಸ್ಥೆ ಮಾಡಲಾಗಿದೆಯೆಂದು ದೇಗುಲ ತಿಳಿಸಿದೆ.