ಮಂಡಕ್ಕಿ ಹಿಟ್ಟಿನಲ್ಲಿ ಮೂರು ಬಗೆಯ ರುಚಿಯಾದ ರೆಸಿಪಿ…

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಂಡಕ್ಕಿ ಕೇವಲ ಸ್ನ್ಯಾಕ್ಸ್‌ ಅಂದುಕೊಂಡಿದೀರಾ..? ಇಲ್ಲ ರೀ ನಾನು ಹೇಳೋ ಹಾಗೆ ಮಾಡಿದ್ರೆ ರುಚಿ ರುಚಿಯಾಗಿ ಥಟ್‌ ಅಂತ ಇಡ್ಲಿ, ದೋಸೆ, ಪಡ್ಡು ಮಾಡಬಹುದು..ಬನ್ನಿ ಮಾಡೋದು ಹೇಗೆ ಅಂತ ನೋಡೋಣ.

ಮಂಡಕ್ಕಿ-೧ಕಪ್‌
ಸೂಜಿ ರವೆ-೧ ಕಪ್‌
ಗಟ್ಟಿ ಮೊಸರು-೧ಕಪ್‌
ಎಣ್ಣೆ-೨ಟೇಬಲ್‌ ಸ್ಪೂನ್
ಸಾಸಿವೆ-‌೧ಟೇಬಲ್‌ ಸ್ಪೂನ್
ಜೀರಿಗೆ-೧ಟೇಬಲ್‌ ಸ್ಪೂನ್
ಕಡಲೆಬೇಳೆ-೨ಟೇಬಲ್‌ ಸ್ಪೂನ್
ಸ್ವೀಟ್‌ ಕಾರ್ನ್-‌೧ ಕಪ್
ಈರುಳ್ಳಿ-‌೧ಕಪ್
ಕ್ಯಾರೆಟ್-‌‌೧ಕಪ್
ಕ್ಯಾಪ್ಸಿಕಂ-‌೧ಕಪ್
ಕೊತ್ತಂಬರಿ ಸೊಪ್ಪು-ಸ್ವಲ್ಪ
ಹಸಿ ಮೆಣಸಿನಕಾಯಿ-೧ಟೇಬಲ್‌ ಸ್ಪೂನ್
ಉಪ್ಪು-ರುಚಿಗೆ ತಕ್ಕಷ್ಟು

ಮಾಡುವ ವಿಧಾನ
ಮೊದಲಿಗೆ ಮಿಕ್ಸಿಯಲ್ಲಿ ಮಂಡಕ್ಕಿಯನ್ನು ನುಣ್ಣಗೆ ರುಬ್ಬಿಕೊಳ್ಳಬೇಕು. ಅದನ್ನು ಒಂದು ಮಿಕ್ಸಿಂಗ್‌ ಬೌಲ್‌ಗೆ ಹಾಕಿ. ರವೆ, ಮೊಸರು, ಉಪ್ಪು, ಸ್ವಲ್ಪ ಅಡುಗೆ ಸೋಡಾ ಸೇರಿಸಿ, ಅಗತ್ಯವಿದ್ದಷ್ಟು ನೀರು ಸೇರಿಸುತ್ತಾ ಚೆನ್ನಾಗಿ ಕಲಸಿಕೊಳ್ಳಬೇಕು. ..ಇಡ್ಲಿ, ಪಡ್ಡು ಬರುವ ಹದದಲ್ಲಿ ಹಿಟ್ಟು ತಯಾರಿಸಿ ಇಪ್ಪತ್ತು ನಿಮಿಷ ಪಕ್ಕಕ್ಕಿಡಿ. ಬಳಿಕ ಒಂದು ಬಾಣಲೆಗೆ ಎಣ್ಣೆ ಹಾಕಿ ಕಾದ ಬಳಿಕ ಸಾಸಿವೆ, ಜೀರಿಗೆ, ಹಸಿಮೆಣಸು, ಕಡಲೆಬೇಳೆ ಹಾಕಿ ಕೆಂಪಾಗುವವರೆಗೆ ಉರಿಯಬೇಕು. ಬಳಿಕ ಸಣ್ಣಗೆ ಹಚ್ಚಿದ ಈರುಳ್ಳಿ, ಕ್ಯಾರೆಟ್, ಕ್ಯಾಪ್ಸಿಕಂ, ಸ್ವೀಟ್‌ ಕಾರ್ನ್ ಹಾಕಿ ಸ್ವಲ್ಪ ಮೆತ್ತಗಾಗುವವರೆಗೆ ಬಾಡಿಸಿ. ಕೊನೆಯಲ್ಲಿ ಉಪ್ಪು ಹಾಗೆ ಕೊತ್ತಂಬರಿ ಸೊಪ್ಪು ಹಾಕಿ ಬೆರೆಸಿದ ಮಿಶ್ರಣಕ್ಕೆ ಸೇರಿಸಿದರೆ ಹಿಟ್ಟು ರೆಡಿ.

ಈಗ ಅದನ್ನು ಇಡ್ಲಿ ಪಾತ್ರೆಗೆ ಎಣ್ಣೆ ಸವರಿ ಈ ಮಿಶ್ರವಣನ್ನು ಹಾಕಿ ಹಬೆಯಲ್ಲಿ ಬೇಯಿಸಿದ್ರೆ ಸಾಫ್ಟ್‌ ಸಾಫ್ಟ್‌ ಇಡ್ಲಿ ರೆಡಿ. ಅದೇ ಹಿಟ್ಟನ್ನು ಪಡ್ಡು ಮಾಡುವ ಪಾತ್ರೆಗೆ ಹಾಕಿ ನಾಲ್ಕು ನಿಮಿಷ ಬೇಯಿಸಿದ್ರೆ ಪಡ್ಡು ಸಿದ್ದ. ಒಂದು ಕಾವಲಿಗೆ ಎಣ್ಣೆ ಸವರಿ ಹಿಟ್ಟನ್ನು ಕಾವಲಿ ಮೇಲೆ ಹಾಕಿ ಎರಡೂ ಬದಿ ಬೇಯಿಸಿದ್ರೆ ದೋಸೆ ಸವಿಯಲು ಸಿದ್ಧ. ಒಂದೇ ಹಿಟ್ಟಿನಲ್ಲಿ ಮೂರು ಬಗೆಯ ತಿಂಡಿ ಈಗಲೇ ಟ್ರೈ ಮಾಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!