October 8, 2026
Thursday, October 8, 2026
spot_img

ಇಂದು FIH ಹಾಕಿ ವಿಶ್ವಕಪ್‌ನಲ್ಲಿ ಇಂಡೋ-ಪಾಕ್ ರಣರೋಚಕ ಸಮರ: ನೇರ ಪ್ರಸಾರ ಎಲ್ಲಿ, ಎಷ್ಟೊತ್ತಿಗೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೆದರ್ಲ್ಯಾಂಡ್ಸ್‌ನಲ್ಲಿ ನಡೆಯುತ್ತಿರುವ ಪುರುಷರ ಎಫ್‌ಐಎಚ್ (FIH) ಹಾಕಿ ವಿಶ್ವಕಪ್ 2026 ಟೂರ್ನಿ ರೋಚಕ ಹಂತ ತಲುಪಿದೆ. ಇಂದು ಕ್ರೀಡಾಲೋಕದ ಅತಿದೊಡ್ಡ ಸಾಂಪ್ರದಾಯಿಕ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ್ ಮುಖಾಮುಖಿಯಾಗಲಿವೆ. ಪೂಲ್ ‘ಡಿ’ ಯಲ್ಲಿ ಸ್ಥಾನ ಪಡೆದಿರುವ ಉಭಯ ತಂಡಗಳಿಗೂ ಮುಂದಿನ ಹಂತ ತಲುಪಲು ಈ ಪಂದ್ಯ ಅತ್ಯಂತ ಪ್ರಮುಖವಾಗಿದೆ.

ಪಂದ್ಯದ ಸಮಯ ಮತ್ತು ಸ್ಥಳ

ಈ ಹೈವೋಲ್ಟೇಜ್ ಪಂದ್ಯವು ನೆದರ್ಲ್ಯಾಂಡ್ಸ್‌ನ ಆಮ್ಸ್ಟಲ್ವೀನ್‌ನಲ್ಲಿರುವ ಐತಿಹಾಸಿಕ ‘ವಾಗ್ನರ್ ಹಾಕಿ ಸ್ಟೇಡಿಯಂ’ನಲ್ಲಿ ಜರುಗಲಿದೆ. ಭಾರತೀಯ ಕಾಲಮಾನದ ಪ್ರಕಾರ ಇಂದು ಸಂಜೆ 6:30 ಕ್ಕೆ ಪಂದ್ಯ ಆರಂಭವಾಗಲಿದೆ.

ನೇರ ಪ್ರಸಾರ ಮತ್ತು ಲೈವ್ ಸ್ಟ್ರೀಮಿಂಗ್ ವಿವರ

  • ಟಿವಿ ಪ್ರಸಾರ: ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಅಧಿಕೃತ ಪ್ರಸಾರಕರಾಗಿದ್ದು, Star Sports Select 2, Star Sports Select 2 HD ಮತ್ತು Star Sports Khel ಚಾನೆಲ್‌ಗಳಲ್ಲಿ ವೀಕ್ಷಿಸಬಹುದು.
  • ಉಚಿತ ಪ್ರಸಾರ: ಡಿಡಿ ಫ್ರೀ ಡಿಶ್ ಬಳಕೆದಾರರು DD Sports ಚಾನೆಲ್ ಮೂಲಕ ಉಚಿತವಾಗಿ ನೇರ ಪ್ರಸಾರ ವೀಕ್ಷಿಸಬಹುದು.
  • ಡಿಜಿಟಲ್/ಮೊಬೈಲ್: JioHotstar ಆ್ಯಪ್ ಹಾಗೂ ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಲಭ್ಯವಿರಲಿದೆ.

ಅಂಕಪಟ್ಟಿ ಹಾಗೂ ಭಾರತೀಯ ತಂಡದ ಶಕ್ತಿ

ಸದ್ಯ ಪೂಲ್ ‘ಡಿ’ ಅಂಕಪಟ್ಟಿಯಲ್ಲಿ ಭಾರತ ತಂಡ 3 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಪಾಕಿಸ್ತಾನ 1 ಅಂಕ ಗಳಿಸಿದೆ. ಮುಂದಿನ ಹಂತಕ್ಕೆ ಸುಲಭವಾಗಿ ಅರ್ಹತೆ ಪಡೆಯಲು ಭಾರತಕ್ಕೆ ಜಯ ಅಥವಾ ಡ್ರಾ ಅಗತ್ಯವಿದೆ. ಮತ್ತೊಂದೆಡೆ ಪಾಕಿಸ್ತಾನಕ್ಕೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ.

Must Read