September 27, 2026
Sunday, September 27, 2026
spot_img

ಬಳ್ಳಾರಿಯಲ್ಲಿ ಗುಡುಗು, ಗಾಳಿ ಸಹಿತ ಭಾರೀ ಮಳೆ: ರಸ್ತೆಗೆ ಉರುಳಿದ ಮರಗಳು, ಸುಗಮ ಸಂಚಾರಕ್ಕೆ ಅಡ್ಡಿ

ಹೊಸದಿಗಂತ ವರದಿ, ಬಳ್ಳಾರಿ:

ಬಿಸಿಲನಾಡು ಬಳ್ಳಾರಿಯಲ್ಲಿ ಮಂಗಳವಾರ ಮಧ್ಯಾಹ್ನ ಗುಡುಗು, ಸಿಡಿಲು ಮಿಶ್ರಿತ ಕೆಲ ಕಾಲ ಭಾರಿ ಮಳೆಯಾಗಿದ್ದು, ಬಿಸಿಲಿನ ತಾಪಕ್ಕೆ ಹೈರಾಣರಾಗಿದ್ದ ಜನರು ನಿಟ್ಟುಸಿರು ಬಿಟ್ಟರು.

ವರುಣನ ಆಗಮನದಿಂದ ಸಂತಸ

ವರ್ಷದ ಮೊದಲ ಮಳೆಯ ಸಿಂಚನಕ್ಕೆ ಜಿಲ್ಲೆಯ ಜನರು ತಂಪಾದ ವಾತಾವರಣ ಅನುಭವಿಸಿದರು. ಬೆಳಿಗ್ಗೆಯಾದರೆ ಸಾಕು ಬಿಸಿಲಿನ ಪ್ರತಾಪಕ್ಕೆ ತತ್ತರಿಸಿದ್ದ ಜಿಲ್ಲೆಯ ಜನರಿಗೆ ಮಳೆರಾಯನ ದರ್ಶನದಿಂದ ಸ್ವಲ್ಪ ಮಟ್ಟಿಗೆ ನಿರಾಳತೆ ದೊರೆತಂತಾಯಿತು.

ರಸ್ತೆಗಳು ಜಲಾವೃತ

ಗುಡುಗಿನ ಸದ್ದು, ಸಿಡಿಲಿನ ಅಬ್ಬರ, ಗಾಳಿ, ಮಳೆ ರಭಸಕ್ಕೆ ನಗರ ಸೇರಿದಂತೆ ನಾನಾ ಕಡೆ ಕೆಲಕಾಲ ನಾನಾ ರಸ್ತೆಗಳು ಜಲಾವೃತಗೊಂಡು ಸುಗಮ ಸಂಚಾರಕ್ಕೆ ಕೆಲಕಾಲ ಅಡ್ಡಿಯಾಯಿತು.

ಸುಗಮ ಸಂಚಾರಕ್ಕೆ ಅಡೆತಡೆ

ನಗರದ ಕೆಲ ವಾರ್ಡ್ ಗಳಲ್ಲಿ ಗಾಳಿ ಮಳೆಗೆ ಮರಗಳು ರಸ್ತೆ ಮೇಲೆ ಬಿದ್ದು ಸಂಚಾರಕ್ಕೆ ಅಡ್ಡಿ ಮಾಡಿತು. ಕೆಲ ಕಡೆ ಮುಖ್ಯರಸ್ತೆಗಳಲ್ಲಿ ನೀರು ಜಲಾವೃತಗೊಂಡು ಸುಗಮ ಸಂಚಾರಕ್ಕೆ ಅಡೆತಡೆ ಉಂಟಾಯಿತು.

Must Read