ಟಿಬೆಟಿಯನ್ ಲಾಮಾ ಕ್ಯಾಂಪಿನ ದರೋಡೆ ಪ್ರಕರಣ: ಆರೋಪಿಗಳಿಗೆ 10 ವರ್ಷ ಜೈಲು

ಹೊಸ ದಿಗಂತ ವರದಿ, ಮುಂಡಗೋಡ

ಮುಂಡಗೋಡ ತಾಲೂಕಿನ ಟಿಬೆಟಿಯನ್ ಲಾಮಾ ಕ್ಯಾಂಪಿನ ದರೋಡೆ ಪ್ರಕರಣದ ಆರೋಪಿಗಳಿಗೆ ಗುರುವಾರ ಶಿರಶಿಯ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ತಲಾ 10 ಸಾವಿರ ದಂಡ ವಿಧಿಸಿದೆ.

ಮುಂಡಗೋಡ ಪಟ್ಟಣದ ಆರೋಪಿಗಳಾದ ವಸಂತ ಕೊರವರ, ಮಂಜು ನವಲೆ, ಕಿರಣ ಸೊಳಂಕಿ, ಬಸಾಪೂರ ಗ್ರಾಮದ ಮಧುಸಿಂಗ್ ರಜಪೂತ ಅವರಿಗೆ ನ್ಯಾಯಾಲಯವು 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ತಲಾ 10 ಸಾವಿರ ದಂಡವನ್ನು ವಿಧಿಸಿ ತೀರ್ಪು ನೀಡಿದೆ.

ಘಟನೆ ವಿವರ: ತಾಲೂಕಿನ ಟಿಬೇಟಿಯನ್ ಕ್ಯಾಂಪ್ ನಂ.೧ರ ಜಾಂಗಚುಪ್ ರಾಚನ್ ಎಂಬುವರ ಮನೆಗೆ 2019 ಜನವರಿ 19ರ ರಾತ್ರಿ ಮನೆಗೆ ನುಗ್ಗಿ ತಲವಾರ ಹಾಗೂ ಇತರೆ ಆಯುಧಗಳಿಂದ ಹೆದರಿಸಿ ಮನೆಯಲ್ಲಿದ್ದ ಇಬ್ಬರನ್ನು ಕಟ್ಟಿಹಾಕಿ ಆರು ಲಕ್ಷರೂ ನಗದು ಹಾಗೂ ಎರಡು ಐಪೋನ್, ಓಪೋ ಕಂಪನಿಯ ಮೊಬೈಲ್, ಇಂಟರನೆಟ್ ಡೊಂಗಲ್, ಟ್ಯಾಬ್, ಸಿಸಿ ಟಿವಿಯ ಪ್ರೋಜೆಕ್ಟರ್ ಮತ್ತು 3 ಬಂಗಾರದ ಚೈನ್, 2 ಬ್ರೇಸಲೇಟ್, 4 ಉಂಗುರ, 3 ಜೊತೆ ಕಿವಿಯ ಓಲೆ ಸೇರಿ ಯಾವುದೂ ಸಾಕ್ಷೀ ಸೀಗದಂತೆ ಮನೆಯ ಒಳೆಗೆ ಇದ್ದ ಸಿಸಿ ಟಿವಿಯ ಕ್ಯಾಮೇರಾ ಡಿ.ಎ.ಆರ್ ಕಳ್ಳತನ ಮಾಡಿಕೊಂಡು ಹೋಗಿದರಲ್ಲದೆ ಜೀವ ಬೆದರಿಕೆ ಹಾಕಿದ್ದರ ಬಗ್ಗೆ ಇಲ್ಲಿನ ಪೊಲೀಸ ಠಾಣೆಯಲ್ಲಿ ದಾಖಲಿಲಾಗಿತ್ತು.
ಸಿಪಿಐ ಶಿವಾನಂದ ಚಲವಾದಿ ಅವರು ತನಿಖೆ ಮಾಡಿ ನ್ಯಾಯಾಲಯಕ್ಕೆ ಆರೋಪಿಗಳ ಮೇಲೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.

ಶಿರಶಿಯ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಾರವಾರ, ಶಿರಶಿ ಫೀಠಾಸೀನ ನ್ಯಾಯಾಲಯದ ನ್ಯಾಯಾಧೀಶ ಕಿರಣ ಕಿಣಿ ಅವರು ತೀಪು ನೀಡಿದ್ದಾರೆ. ಸರಕಾರದ ಪರವಾಗಿ ಅಭಿಯೋಜಕರಾದ ರಾಜೇಶ ಮಳಗಿಕರ ಅವರು ಪ್ರಕರಣದ ಸಾಕ್ಷ್ಯವನ್ನು ಗಂಭೀರವಾಗಿ ತೆಗೆದುಕೊಂಡು ಆರೋಪಿತರಿಗೆ ಶಿಕ್ಷೆ ವಿಧಿಸಬೇಕೆಂದು ವಾದವನ್ನು ಮಂಡಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!