Monday, November 28, 2022

Latest Posts

ಟಿಬೆಟ್‌ನ ಸ್ವಾತಂತ್ರ್ಯಕ್ಕೆ ಆಗ್ರಹಿಸಿ ಚೀನಾ ರಾಯಭಾರಿ ಕಚೇರಿ ಬಳಿ ಟಿಬೆಟಿಯನ್ನರ ಪ್ರತಿಭಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಟಿಬೆಟ್‌ನ ಸ್ವಾತಂತ್ರ್ಯಕ್ಕೆ ಆಗ್ರಹಿಸಿ ದೆಹಲಿಯ ಚೀನಾ ರಾಯಭಾರಿ ಕಚೇರಿಯ ಹೊರಗೆ ಟಿಬೆಟಿಯನ್ ಯುವಕರು ಪ್ರತಿಭಟನೆ ನಡೆಸಿದರು.

ಟಿಬೆಟ್ ಅನ್ನು ಚೀನಾದಿಂದ ಮುಕ್ತಗೊಳಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ನಮ್ಮ ಬೆಂಬಲಕ್ಕೆ ಭಾರತ ಸರ್ಕಾರ ಇದೆ. ಸಾಮೂಹಿಕ ಡಿಎನ್‌ಎ ಸಂಗ್ರಹ, ಹತ್ಯೆಗಳನ್ನು ಚೀನಾ ಕೂಡಲೇ ನಿಲ್ಲಿಸಬೇಕು ಎಂದು ಪ್ರತಿಭಟನಾ ನಿರತ ಯುವಕನೊಬ್ಬ ಹೇಳಿದನು.

ದೆಹಲಿ ಚೀನಾ ರಾಯಭಾರಿ ಕಚೇರಿ ಬಳಿ ಗೊಂದಲ ವಾತಾವರಣ ನಿರ್ಮಾಣವಾಗಿದ್ದು, ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!