May 10, 2026
Sunday, May 10, 2026
spot_img

ಸ್ಕೂಟರ್‌ ಕ್ಲಚ್‌ ವೈರ್‌ ಉರುಳಿಗೆ ಹುಲಿ ಸಾ*ವು: ತನಿಖೆಗೆ ಮುಂದಾದ ಅರಣ್ಯ ಇಲಾಖೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಿಳಿರಂಗನಬೆಟ್ಟ ಹುಲಿ ಸಂರಕ್ಷಿತಾರಣ್ಯದ ಗುಂಡಾಲ್‌ ಡ್ಯಾಂನಲ್ಲಿ ಗಂಡು ಹುಲಿಯ ಮೃತದೇಹ ಸಿಕ್ಕಿದೆ.

ಸ್ಕೂಟರ್‌ನ ಕ್ಲಚ್‌ ವೈರ್‌ ಕತ್ತಿಗೆ ಸಿಲುಕಿಕೊಂಡು ಹುಲಿ ಮೃತಪಟ್ಟಿದೆ. ಈ ಬಗ್ಗೆ ಮಾಹಿತಿ ಕಲೆಹಾಕಲಾಗಿದ್ದು, ಉರುಳು ಹಾಕಿದ್ದು ಯಾರು ಎಂದು ಅರಣ್ಯ ಇಲಾಖೆ ಹುಡುಕುತ್ತಿದೆ.

ಬೇರೆ ಪ್ರಾಣಿಗೆ ಹಾಕಿದ್ದ ಉರುಳಿಗೆ ಹುಲಿ ಬಲಿಯಾಯ್ತಾ? ಹುಲಿಯನ್ನೇ ಕೊಲ್ಲಲು ಹೋಗಿದ್ರಾ? ಪ್ರಾಣ ರಕ್ಷಣೆಗಾಗಿ ಮಾಡಿದ್ದಾ? ಎಲ್ಲ ಆಯಾಮಗಳಲ್ಲಿಯೂ ತನಿಖೆ ನಡೆಯುತ್ತಿದೆ.

ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ವ್ಯಾಪ್ತಿಯ ಕೊಳ್ಳೇಗಾಲ ತಾಲೂಕಿನ ಗುಂಡಾಲ್ ಡ್ಯಾಂನಲ್ಲಿ ತೇಲುವ ಸ್ಥಿತಿಯಲ್ಲಿ ಹುಲಿಯ ಕಳೇಬರ ಸಿಕ್ಕಿತ್ತು. ಸತ್ತ ಹುಲಿಯ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಆದರೆ ಹುಲಿಯ ಕೊರಳಿಗೆ ಸ್ಕೂಟರ್ ಕ್ಲಚ್ ವೈರ್ ಸುತ್ತಿಕೊಂಡು ಉಸಿರುಗಟ್ಟಿ ಸಾವನ್ನಪ್ಪಿರುವುದು ಅಧಿಕಾರಿಗಳಿಗೆ ಗೊತ್ತಾಗಿದೆ.

ಹುಲಿಯ ಹೊಟ್ಟೆಯಲ್ಲಿ ನೀರು ಸಿಕ್ಕಿದೆ. ನೀರು ಕುಡಿಯುವ ವೇಳೆ ಹುಲಿ ಬದುಕಿದೆ. ನಂತರ ಹುಲಿ ನೀರಿಗೆ ಬಿದ್ದು ಮೃತಪಟ್ಟಿದೆ.ಆದರೆ ಮೂರು ನಾಲ್ಕು ದಿನದ ಹಿಂದೆಯೇ ಕುತ್ತಿಗೆಗೆ ಉರುಳು ಸಿಲುಕಿತ್ತು. ನಿರಂತರವಾಗಿ ಉರುಳು ಬಿಗಿದ ಪರಿಣಾಮ ಹುಲಿ ಮೃತಪಟ್ಟಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !