July 11, 2026
Saturday, July 11, 2026
spot_img

ಚಿಕ್ಕಮಗಳೂರಿನಲ್ಲಿ ಸನ್‌ಸೆಟ್‌ ನೋಡೋಕೆ ಹೋಗ್ತಿದ್ದ ಜನಕ್ಕೆ ಹುಲಿ ದರುಶನ, ಆತಂಕದ ವಾತಾವರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಿಕ್ಕಮಗಳೂರಿನ ಹೊಲಗದ್ದೆ, ಕವಿಕಲ್‌ ಮಠ ಸಂಪರ್ಕ ರಸ್ತೆಯಲ್ಲಿ ಸನ್‌ಸೆಟ್‌ ನೋಡಲು ಹೋಗುತ್ತಿದ್ದ ಪ್ರವಾಸಿಗರ ಎದುರು ಬೃಹತ್‌ ಗಾತ್ರದ ಹುಲಿಯೊಂದು ಪ್ರತ್ಯಕ್ಷವಾಗಿದೆ.

ಜನರನ್ನು ಕಂಡು ರಸ್ತೆ ಮಧ್ಯದಲ್ಲೇ ಕೆಲ ಹೊತ್ತು ನಿಂತಿದ್ದ ಹುಲಿ, ಪ್ರವಾಸಿಗರ ವಾಹನದತ್ತ ದಿಟ್ಟಿಸಿ ನೋಡಿದೆ. ಅನಿರೀಕ್ಷಿತವಾಗಿ ಹುಲಿಯನ್ನು ಕಂಡ ಪ್ರವಾಸಿಗರು ಕೆಲ ಕ್ಷಣ ಬೆಚ್ಚಿಬಿದ್ದಿದ್ದು, ವಾಹನದಿಂದ ಕೆಳಗಿಳಿಯದೇ ಸುರಕ್ಷಿತ ಅಂತರದಲ್ಲಿಯೇ ನಿಂತು ದೃಶ್ಯವನ್ನು ತಮ್ಮ ಮೊಬೈಲ್, ಕ್ಯಾಮೆರಾ​​ಗಳಲ್ಲಿ ಸೆರೆ ಹಿಡಿದಿದ್ದಾರೆ. ಕೆಲ ನಿಮಿಷಗಳ ಕಾಲ ರಸ್ತೆ ಮೇಲೆ ಸಂಚರಿಸಿದ ಹುಲಿ ಬಳಿಕ ನಿಧಾನವಾಗಿ ಅರಣ್ಯದತ್ತ ತೆರಳಿದೆ ಎಂದು ತಿಳಿದು ಬಂದಿದೆ.

ಈ ಪ್ರದೇಶವು ಮುತ್ತೋಡಿ ಅರಣ್ಯ ವಲಯಕ್ಕೆ ಹೊಂದಿಕೊಂಡಿರುವುದರಿಂದ ಕಳೆದ ಕೆಲವು ತಿಂಗಳುಗಳಿಂದ ಹುಲಿ ಸೇರಿದಂತೆ ವಿವಿಧ ಕಾಡು ಪ್ರಾಣಿಗಳ ಓಡಾಟ ಹೆಚ್ಚಾಗಿದೆ. ಇತ್ತೀಚೆಗೆ ಇದೇ ಭಾಗದಲ್ಲಿ ಹುಲಿಯ ಹೆಜ್ಜೆ ಗುರುತುಗಳು ಮತ್ತು ಸಂಚಾರದ ಬಗ್ಗೆ ಗ್ರಾಮಸ್ಥರು ಹಲವು ಬಾರಿ ಮಾಹಿತಿ ನೀಡಿದ್ದು, ಇದೀಗ ರಸ್ತೆಯಲ್ಲೇ ಹುಲಿ ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಪ್ರವಾಸಿಗರಿಗೆ ಇದು ಒಂದು ದಿನದ ದೃಶ್ಯ ಮಾತ್ರ. ಇಲ್ಲಿಯೇ ವಾಸವಿರುವ ಜನರಿಗೆ ಇದು ದುಃಸ್ವಪ್ನದಂತಾಗಿದೆ. . ವಿಶೇಷವಾಗಿ ಸಂಜೆ ಹಾಗೂ ರಾತ್ರಿ ವೇಳೆಯಲ್ಲಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡ ರಸ್ತೆಗಳಲ್ಲಿ ಅನಗತ್ಯ ಸಂಚಾರವನ್ನು ನಿಯಂತ್ರಿಸುವ ಅಗತ್ಯವಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !