ಅಮೆರಿಕದ ಅಯೋವಾ ಶಾಲೆಯಲ್ಲಿ ಗುಂಡಿನ ಸದ್ದು, ವಿದ್ಯಾರ್ಥಿ ಸಾವು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ಅಯೋವಾ ನಗರದ ಶಾಲೆಯಲ್ಲಿ ಗುಂಡಿನ ದಾಳಿ ನಡೆದಿದ್ದು, ಓರ್ವ ವಿದ್ಯಾರ್ಥಿ ಮೃತಪಟ್ಟಿದ್ದಾರೆ.

ಐವರು ವಿದ್ಯಾರ್ಥಿಗಳಿಗೂ ಗುಂಡೇಟು ತಗುಲಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕೃತ್ಯ ಎಸಗಿದ ಆರೋಪಿಗೆ ಬರೀ ೧೭ ವರ್ಷ. ಈತ ಅಟ್ಯಾಕ್ ನಂತರ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ರಜೆ ಮುಗಿದು ಈಗಿನ್ನೂ ಶಾಲೆ ಆರಂಭವಾಗಿತ್ತು. ಏಕಾಏಕಿ ಯುವಕನೊಬ್ಬ ಶಾಲೆಯೊಳಗೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದಾನೆ. ಆರನೇ ತರಗತಿ ಬಾಲಕ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆರೋಪಿ ಹೈಸ್ಕೂಲ್ ವಿದ್ಯಾರ್ಥಿ ಡೈಲನ್ ಬಟ್ಲರ್ ಎಂದು ಗುರುತಿಸಲಾಗಿದೆ. ಈತ ಯಾವ ಕಾರಣಕ್ಕಾಗಿ ಅಥವಾ ಯಾರ ಪ್ರೇರಣೆಯಿಂದ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!