Sunday, December 4, 2022

Latest Posts

ಟಾಸ್ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್ ಆಯ್ಕೆ: ಭಾರತ ತಂಡದಲ್ಲಿ ಸ್ಟಾರ್‌ ವೇಗಿಗೆ ಸ್ಥಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೆಕ್ಲೀನ್ ಪಾರ್ಕ್‌ನಲ್ಲಿ ನಡೆಯುತ್ತಿರುವ ಮೂರನೇ ಹಾಗೂ ಅಂತಿಮ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಟಾಸ್‌ ಗೆದ್ದ ನ್ಯೂಜಿಲೆಂಡ್ ನಾಯಕ ಟಿಮ್ ಸೌಥಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಎರಡೂ ತಂಡಗಳು ತಲಾ ಒಂದೊಂದು ಬದಲಾವಣೆ ಮಾಡಿಕೊಂಡಿವೆ. ಭಾರತೀಯ ತಂಡದಲ್ಲಿ ವಾಷಿಂಗ್ಟನ್ ಸುಂದರ್‌ ಬದಲಿಗೆ ಹರ್ಷಲ್ ಪಟೇಲ್ ಗೆ ಸ್ಥಾನ ಕಲ್ಪಿಸಲಾಗಿದೆ. ಕಿವೀಸ್‌ ತಂಡದ ನಾಯಕ ಕೇನ್ ವಿಲಿಯಮ್ಸನ್ ಪೂರ್ವ-ನಿರ್ಧರಿತ ವೈದ್ಯಕೀಯ ಪರೀಕ್ಷೆ ಕಾರಣದಿಂದ ಈ ಪಂದ್ಯದಿಂದ ಹೊರಗುಳಿದಿದ್ದು, ಅವರ ಬದಲಿಗೆ ಮಾರ್ಕ್ ಚಾಪ್‌ಮನ್ ತಂಡದೊಳಗೆ ಬಂದಿದ್ದಾರೆ. ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ. ಮೊದಲ ಪಂದ್ಯ ವಾಶ್ ಔಟ್ ಆಗಿತ್ತು. ಈ ಪಂದ್ಯ ಗೆದ್ದರೆ ಸರಣಿ ಭಾರತದ ವಶವಾಗಲಿದೆ. ಸೋತರೆ ನ್ಯೂಜಿಲೆಂಡ್‌ ಸಮಬಲ ಮಾಡಿಕೊಳ್ಳಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!