Monday, September 25, 2023

Latest Posts

ಮಕ್ಕಳ ಜತೆ ತಿರುಪತಿಗೆ ತೆರಳುವವರಿಗೆ ಸಮಯ ಬದಲಾವಣೆ, ಟಿಟಿಡಿ ನೂತನ ನಿಯಮ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಿರುಪತಿ ತಿಮ್ಮಪ್ಪನ ದರುಶನಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗುವವರು ಈ ಸುದ್ದಿಯನ್ನು ಓದಲೇಬೇಕು..
ತಿರುಮಲ ಅಲಿಪಿರಿ ಮಾರ್ಗದಲ್ಲಿ ಚಿರತೆ ದಾಳಿಗೆ ಬಾಲಕಿ ಮೃತಪಟ್ಟಿದ್ದು, ಇದೀಗ ಮಕ್ಕಳೊಂದಿಗೆ ಬೆಟ್ಟ ಹತ್ತುವವರಿಗಾಗಿ ನೂತನ ನಿಯಮವನ್ನು ತಿರುಮಲ ತಿರುಪತಿ ದೇವಸ್ಥಾನ ಪ್ರಕಟಿಸಿದೆ.

ಅಲಿಪಿರಿ ಹಾಗೂ ತಿರುಮಲ ನಡುವೆ ಪೊಲೀಸ್ ಚೌಕಗಳನ್ನು ತೆರೆಯಲಾಗಿದೆ. ಇಲ್ಲಿ ಮಕ್ಕಳು ಹಾಗೂ ಶಿಶುಗಳ ಕೈಗೆ ಭದ್ರತಾ ಟ್ಯಾಗ್ ಕಟ್ಟಲಾಗುತ್ತದೆ. ಇನ್ನು 15 ವರ್ಷದೊಳಗಿನ ಮಕ್ಕಳ ಜತೆ ಬೆಟ್ಟಕ್ಕೆ ಬರುವವರು ಬೆಳಗ್ಗೆ 5 ರಿಂದ ಮಧ್ಯಾಹ್ನ ೨ರವರೆಗೆ ಮಾತ್ರ ಬೆಟ್ಟ ಹತ್ತಲು ಅವಕಾಶ ನೀಡಲಾಗಿದೆ. ತಿರುಮಲ ಬೆಟ್ಟದ ಐದು ಕಡೆ ಚಿರತೆಗಳ ಚಲನವಲನ ಕಂಡುಬಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!