October 12, 2026
Monday, October 12, 2026
spot_img

WEATHER | ಬಿಸಿಲಿಗೆ ಗುಡ್‌ ಬೈ ಹೇಳೋ ಟೈಮ್‌ ಬಂದಾಯ್ತಾ? ರಾಜ್ಯದಲ್ಲಿ ಇಂದು ಕೂಡ ಗುಡುಗು ಸಹಿತ ಭಾರೀ ಮಳೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ತೀವ್ರ ಬಿಸಿಲಿನಿಂದ ಬಳಲುತ್ತಿದ್ದ ರಾಜ್ಯಕ್ಕೆ ಮಳೆ ತಂಪೆರೆಯುತ್ತಲೇ ಇದೆ. ಆದರೆ ಇದು ಪರ್ಮನೆಂಟ್‌ ಅಥವಾ ಒಂದು ದಿನದ್ದಾ ಗೊತ್ತಾಗದೇ ಜನ ಕನ್ಫ್ಯೂಸ್‌ ಆಗಿದ್ದಾರೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಹವಾಮಾನ ವೈಪರೀತ್ಯದಿಂದಾಗಿ ರಾಜ್ಯದಲ್ಲಿಇಂದು ಕೂಡ ಗುಡುಗು ಸಹಿತ ಮಳೆ ಬೀಳಲಿದೆ.

ಭಾರತೀಯ ಹವಾಮಾನ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದ್ದು, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಇಂದು ಸಂಪೂರ್ಣ ಮೋಡ ಕವಿದ ವಾತಾವರಣ ಇರಲಿದೆ. ಸಂಜೆಯ ವೇಳೆಗೆ ಜೋರು ಮಳೆ ಧರೆಗೆ ಅಪ್ಪಳಿಸಲಿದೆ.

ಇನ್ನು ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಹಾಸನದಲ್ಲಿ ಮಳೆ ಸಾಧ್ಯತೆ ಇದೆ. ಆದರೆ ಗಾಳಿಯ ವೇಗ ಜೋರು! ಇನ್ನು ರಾಜಧಾನಿ ಬೆಂಗಳೂರಿಗೆ ಮಧ್ಯಾಹ್ನದ ನಂತರ ಕರಿನೆರಳು ಆವರಿಸಲಿದೆ. ರಾತ್ರಿ ಧೋ ಎನ್ನುವ ಮಳೆ ಸುರಿಯುತ್ತದೆ.

Must Read