ಮೇಷ.
ನಿಮ್ಮನ್ನು ಅರ್ಥ ಮಾಡಿಕೊಳ್ಳಲು ಕೆಲವರು ವಿಫಲರಾಗುವರು. ಅವರಿಗೆ ಮನದಟ್ಟು ಮಾಡುವ ಪ್ರಯತ್ನ ಬಿಡಿ. ತಾಳ್ಮೆಯೇ ನಿಮ್ಮ ನೆರವಿಗೆ ಬರಲಿದೆ.
ವೃಷಭ
ನಿಮ್ಮ ಕೆಲಸದ ಪರಾಮರ್ಶೆ ನಡೆಸಿ. ಇನ್ನೂ ಉತ್ತಮ ಕಾರ್ಯ ನಡೆಸಲು ನಿಮಗೆ ಸಾಧ್ಯ. ಅಲ್ಪತೃಪ್ತಿ ಬಿಡಿ. ದೊಡ್ಡ ಗುರಿ ಇರಿಸಿಕೊಳ್ಳಿ.
ಮಿಥುನ
ನಿಮ್ಮ ಶ್ರೇಷ್ಠ ನಿರ್ವಹಣೆ ಇತರರ ಗಮನಕ್ಕೆ ಬಾರದೆ ಹೋಗಬಹುದು. ನಿರಾಶೆ ಬೇಡ. ನಿಮ್ಮ ಕಾರ್ಯ ಮುಂದುವರಿಸಿರಿ.
ಕಟಕ
ಪಾಸಿಟಿವ್ ಚಿಂತನೆ ಇರಿಸಿಕೊಳ್ಳಿ. ಸಾಧಿಸುವಿರಿ. ಇಲ್ಲವಾದರೆ ವಿಫಲತೆ ಕಾಣುವಿರಿ. ಬಂಧುಗಳ ಆಕ್ರೋಶ ಎದುರಿಸುವಿರಿ. ಆರ್ಥಿಕ ಒತ್ತಡ.
ಸಿಂಹ
ಅದೃಷ್ಟದ ದಿನ. ಕಾರ್ಯದಲ್ಲಿ ಸಫಲತೆ. ನಿಮ್ಮ ಹೃದಯಕ್ಕೆ ಆಪ್ತರಾದವರು ನಿಮ್ಮೆಡೆಗೆ ಒಲವು ತೋರುವರು. ಆರ್ಥಿಕ ಉನ್ನತಿ.
ಕನ್ಯಾ
ಸಂತೋಷ, ತೃಪ್ತಿ, ಸಾಧನೆ ಇವು ನಿಮ್ಮ ಪಾಲಿಗೆ ಇಂದು ಒದಗಲಿವೆ. ನಿರ್ಧಾರ ಉತ್ತಮ ಫಲ ನೀಡಲಿದೆ. ಬಂಧುಗಳ ಆತಿಥ್ಯ ಸಿಗಲಿದೆ.
ತುಲಾ
ಹಳೆ ಹೂಡಿಕೆಯ ಲಾಭ ಇಂದು ಸಿಗಲಿದೆ. ಪ್ರಯಾಣದಲ್ಲಿ ಸಮಸ್ಯೆ. ಕೆಲವರಿಗೆ ಅಜೀರ್ಣ, ಗ್ಯಾಸ್ಟ್ರಿಕ್ ಸಮಸ್ಯೆ ಕಾಡಬಹುದು.
ವೃಶ್ಚಿಕ
ಬಿಡುವಿರದ ದಿನ. ಇದರಿಂದಾಗಿ ವೈಯಕ್ತಿಕ ವಿಷಯ ಕೂಡ ಗೌಣ ಆಗಲಿದೆ. ಆರೋಗ್ಯದ ಕುರಿತಂತೆ ನಿರ್ಲಕ್ಷ್ಯ ತಾಳಬೇಡಿ.
ಧನು
ವೃತ್ತಿಕ್ಷೇತ್ರದಲ್ಲಿ ನಿಗೂಢ ಶತ್ರುಗಳು ಕಾಟ ಕೊಡುವರು. ಎಚ್ಚರದಿಂದ ನಡಕೊಳ್ಳಿ. ಹಿರಿಯರಿಗೆ ಸಂಽನೋವು ಸಂಭವ. ಆರ್ಥಿಕ ಹಿನ್ನಡೆ.
ಮಕರ
ಆಂತರಾತ್ಮದ ಮಾತು ಕೇಳಿ. ವಿರೋಽಗಳ ಬಗ್ಗೆ ಎಚ್ಚರದಿಂದಿರಿ. ಕೋಪಕ್ಕೆ ವಿವೇಕ ಬಲಿ ಕೊಡಬೇಡಿ. ಕೌಟುಂಬಿಕ ಸಹಕಾರ ಪಡೆದುಕೊಳ್ಳಿ.
ಕುಂಭ
ಪೂರ್ವನಿಗದಿತ ಕೆಲಸ ಸಾಧ್ಯವಾಗದು. ಯೋಜನೆ ಬದಲಿಸುವ ಅಗತ್ಯ ಬೀಳಲಿದೆ. ತಾಳ್ಮೆಯಿಂದ ವ್ಯವಹರಿಸಿ. ಕೌಟುಂಬಿಕ ಅಸಹಕಾರ.
ಮೀನ
ಯೋಜಿತ ಕೆಲಸಕ್ಕೆ ಹಿಂಜರಿಕೆ ಬಿಡಿ. ದಿಟ್ಟವಾಗಿ ಮುಂದೆ ಹೆಜ್ಜೆ ಇಡಿ. ನಿಮಗೆ ಪೂರಕ ವಾತಾವರಣ ಸೃಷ್ಟಿಯಾಗಲಿದೆ. ಸೂಕ್ತ ನೆರವೂ ಸಿಗಲಿದೆ.



