USEFUL TIPS | ಮೊಬೈಲ್ ಹುಚ್ಚಿನಿಂದ ಸಮಯ ಹಾಳಾಗ್ತಿದ್ಯಾ? ಮೊಬೈಲ್ ದೂರ ಇಡೋಕೆ ಸಿಂಪಲ್ ಉಪಾಯಗಳಿವು..

ಜಗತ್ತಿನಲ್ಲಿ ಮೊಬೈಲ್ ಒಂದು ಇಲ್ಲದೇ ಹೋಗಿದ್ರೆ? ಎಷ್ಟು ಸಮಯ ಉಳಿತಾ ಇತ್ತು ಅಲ್ವಾ? ಕಾಲ್ ಮಾಡೋಕೆ ಲ್ಯಾಂಡ್‌ಲೈನ್ ಹೇಗೂ ಇತ್ತು, ಮೊಬೈಲ್‌ನಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಾ ಬೇಕಿದ್ದು, ಬೇಡವಾದ್ದು ಎಲ್ಲವನ್ನೂ ತಿಳಿಯುತ್ತಾ ಸಮಯ ಹಾಳಾಗಿದ್ದೇ ಗೊತ್ತಾಗೋದಿಲ್ಲ. ಮೊಬೈಲ್ ಬಳಕೆ ಹೆಚ್ಚು ಆಗ್ತಿದೆ ಎಂದು ನಿಮಗೇ ತಿಳಿದರೆ ಹೀಗೆ ಕಂಡಿತಾ ಮಾಡಿ..

  • ವಾರಕ್ಕೆ ಒಂದು ದಿನ, ರಜೆಯ ದಿನ ಮೊಬೈಲ್ ಬಳಕೆ ನಿಲ್ಲಿಸಿ
  • ಒಂದು ತಿಂಗಳು ಒಂದು ಟೈಮ್ ಟೇಬಲ್ ಹಾಕಿಕೊಳ್ಳಿ, ಆ ಸಮಯವಷ್ಟೇ ಮೊಬೈಲ್ ಬಳಕೆ ಮಾಡಿ.
  • ಸೆಲ್ಫ್ ಕಂಟ್ರೋಲ್ ಮಾಡಲು ಬೇಕಿರುವ ಆಪ್‌ಗಳನ್ನು ಮೊಬೈಲ್‌ಗೆ ಹಾಕಿಕೊಳ್ಳಿ.
  • ಬೆಡ್ ಬಳಿಯೇ ಫೋನ್ ಚಾರ್ಜ್‌ನಲ್ಲಿ ಇಡಬೇಡಿ, ಬಳಕೆ ಮಾಡಲು ಸುಲಭವಾಗುತ್ತದೆ. ಆರೋಗ್ಯಕ್ಕೂ ಒಳ್ಳೆಯದಲ್ಲ.
  • ಫೋನ್ ಸೆಟ್ಟಿಂಗ್ ಬದಲು ಮಾಡಿ
  • ಫೋನ್ ಬಳಕೆಗೆ ಕಡಿವಾಣ ಹಾಕಲು ಬೇಕಾಗಿದ್ದು ನಿಮ್ಮ ಮನಸ್ಸು. ಹಾಗಾಗಿ ಗಟ್ಟಿ ಮನಸ್ಸು ಮಾಡೋದು ಎಲ್ಲಕ್ಕೂ ಮುಖ್ಯ.
  • ರಾತ್ರಿ ಹಾಗೂ ಬೆಳಗ್ಗೆ ಹಾಸಿಗೆ ಮೇಲೆ ಇದ್ದಾಗ ಮೊಬೈಲ್ ಬಳಸೋದಿಲ್ಲ ಎಂದು ಪ್ರತಿಜ್ಞೆ ಮಾಡಿಕೊಳ್ಳಿ
  • ಸಾಧ್ಯವಾದರೆ ಸಾಮಾಜಿಕ ಜಾಲತಾಣಗಳಿಂದ ಸ್ವಲ್ಪ ದಿನ ದೂರ ಉಳಿಯಿರಿ
  • ಮನೆಯವರ ಜೊತೆ ಹೆಚ್ಚು ಸಮಯ ಕಳೆಯೋಕೆ ಆರಂಭಿಸಿ
  • ಹೊರಗೆ ಹೋದರೆ ಬರೀ ಫೋಟೊ ತೆಗೆಯುವುದರಲ್ಲೇ ತಲ್ಲೀನರಾಗಬೇಡಿ, ಕಣ್ಣಿನಲ್ಲಿ ನೋಡಿ ಅನುಭವಿಸಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!