ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಕ್ಕರೆ, ಬೆಲ್ಲದಂತಹ ಸಿಹಿ ತಿನಿಸು ಕದ್ದೊಯ್ಯುತ್ತಿದ್ದ ಇರುವೆಗಳು ಈ ಬಾರಿ ಭಾರೀ ಸ್ಕೆಚ್ ಹಾಕಿವೆ. ಅದು ಅಂತಿಂಥಾ ಸ್ಕೆಚ್ ಅಲ್ಲ ಏಕಾಏಕಿ ಚಿನ್ನದ ಸರಕ್ಕೇ ಗಾಳ ಹಾಕಿವೆ. ಸಾಲಾಗಿ ಬಂದ ಇರುವೆಗಳು ಸಕ್ಕರೆ ಬಿಟ್ಟು ಬಂಗಾರದ ಚೈನ್ ಅನ್ನು ಎಳೆದೊಯ್ದಿವೆ. ಈ ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ಪೋಸ್ಟ್ ಮಾಡಿದ್ದು, ʻಚಿನ್ನದ ಕಳ್ಳಸಾಗಣೆದಾರರು ಇವರು, ನನಗೆ ಕಾಡುತ್ತಿರುವ ದೊಡ್ಡ ಪ್ರಶ್ನೆಯೆಂದರೆ ಇವರನ್ನು ಐಪಿಸಿಯ ಯಾವ ಸೆಕ್ಷನ್ ಅಡಿ ಬುಕ್ ಮಾಡಬಹುದು ಎಂದು ತಮಾಷೆಯ ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋಗೆ ನೆಟ್ಟಿಗರು ಫಿದಾ ಆಗಿದ್ದು, ಬಗೆಬಗೆಯ ಕಾಮೆಂಟ್ ಮಾಡುತ್ತಿದ್ದಾರೆ.
Tiny gold smugglers 😀😀
The question is,under which section of IPC they can be booked? pic.twitter.com/IAtUYSnWpv— Susanta Nanda IFS (@susantananda3) June 28, 2022