August 17, 2026
Monday, August 17, 2026
spot_img

TIPS |‌ ಹೆಚ್ಚು ಎಣ್ಣೆ ಖಾಲಿಯಾಗ್ತಿದೆ ಅಂತ ಬೇಸರ ಬೇಡ: ನಿಮ್ಮ ಕಿಚನ್ ಬಜೆಟ್ ಉಳಿಸಲು ಇಲ್ಲಿದೆ ಸಿಂಪಲ್ ಟ್ರಿಕ್!

ಮಳೆಗಾಲದ ಸಂಜೆಯ ಸಮಯದಲ್ಲಿ ಅಥವಾ ವೀಕೆಂಡ್ ದಿನಗಳಲ್ಲಿ ಬಿಸಿಬಿಸಿ ಪೂರಿ, ಗರಿಗರಿಯಾದ ಬಜ್ಜಿ, ಬೋಂಡಾ ಅಥವಾ ವಡೆಗಳನ್ನು ತಿನ್ನುವ ಮಜಾವೇ ಬೇರೆ. ಆದರೆ, ಈ ಕರಿದ ತಿಂಡಿಗಳನ್ನು ತಿನ್ನುವಾಗ ಎಲ್ಲರನ್ನೂ ಕಾಡುವ ಒಂದೇ ಒಂದು ಚಿಂತೆ ಎಂದರೆ ಅದು ‘ಎಣ್ಣೆ’! ತಿಂಡಿಗಳು ಅತಿಯಾಗಿ ಎಣ್ಣೆ ಹೀರಿಕೊಂಡರೆ ಆರೋಗ್ಯಕ್ಕೂ ಒಳ್ಳೆಯದಲ್ಲ, ತಿನ್ನುವುದಕ್ಕೂ ರುಚಿ ಇರುವುದಿಲ್ಲ.

ಅಡುಗೆಮನೆಯಲ್ಲಿ ಕರಿಯುವ ತಿಂಡಿಗಳನ್ನು ಮಾಡುವಾಗ ಅವು ಅತಿಯಾಗಿ ಎಣ್ಣೆ ಹೀರಿಕೊಳ್ಳದಂತೆ ತಡೆಯಲು ಒಂದು ಅದ್ಭುತವಾದ ಕಿಚನ್ ಹ್ಯಾಕ್ ಇಲ್ಲಿದೆ.

ಎಣ್ಣೆಗೆ ಚಿಟಿಕೆ ಉಪ್ಪನ್ನು ಹಾಕಿ

ಬಜ್ಜಿ, ಬೋಂಡಾ, ವಡೆ ಅಥವಾ ಪೂರಿಗಳನ್ನು ಎಣ್ಣೆಯಲ್ಲಿ ಕರಿಯುವ ಮುನ್ನ, ಎಣ್ಣೆ ಚೆನ್ನಾಗಿ ಕಾಯುತ್ತಿರುವಾಗ ಅದಕ್ಕೆ ಕೇವಲ ಒಂದು ಚಿಟಿಕೆ ಉಪ್ಪನ್ನು (Salt) ಹಾಕಿ. ಉಪ್ಪು ಹಾಕಿದ ನಂತರ ಎಣ್ಣೆಯಲ್ಲಿ ನೊರೆಬರುತ್ತದೆ. ಆನಂತರ ಸಿದ್ಧಪಡಿಸಿಟ್ಟುಕೊಂಡ ಹಿಟ್ಟನ್ನು ಎಣ್ಣೆಗೆ ಹಾಕಿ ಕರಿಯಬಹುದು. ಹೀಗೆ ಮಾಡುವುದರಿಂದ ತಿಂಡಿಗಳು ಎಂದಿಗೂ ಅತಿಯಾಗಿ ಎಣ್ಣೆಯನ್ನು ಹೀರಿಕೊಳ್ಳುವುದಿಲ್ಲ ಮತ್ತು ತಿಂಡಿಗಳು ಗರಿಗರಿಯಾಗುತ್ತವೆ.

ಎಣ್ಣೆಯ ತಾಪಮಾನ ಸರಿಯಾಗಿರಲಿ

ತಣ್ಣಗಿರುವ ಎಣ್ಣೆಗೆ ಎಂದಿಗೂ ಬಜ್ಜಿ ಅಥವಾ ಪೂರಿಯನ್ನು ಹಾಕಬಾರದು. ಎಣ್ಣೆ ಕಡಿಮೆ ಬಿಸಿಯಾಗಿದ್ದರೆ ಹಿಟ್ಟು ಹೆಚ್ಚು ಎಣ್ಣೆಯನ್ನು ಹೀರಿಕೊಳ್ಳುತ್ತದೆ. ಹಾಗೆಯೇ ಎಣ್ಣೆ ಅತಿಯಾಗಿ ಕಾದಿದ್ದರೆ ತಿಂಡಿಯ ಮೇಲ್ಭಾಗ ಸೀದುಹೋಗುತ್ತದೆ ಆದರೆ ಒಳಗಡೆ ಬೇಯುವುದಿಲ್ಲ. ಆದ್ದರಿಂದ ಮಧ್ಯಮ-ಹೆಚ್ಚಿನ ಉರಿಯಲ್ಲಿ ಎಣ್ಣೆಯನ್ನು ಸರಿಯಾಗಿ ಕಾಯಿಸುವುದು ಮುಖ್ಯ.

ಹಿಟ್ಟಿನ ಹದ ಹೀಗಿರಲಿ

 ಬಜ್ಜಿ ಅಥವಾ ಬೋಂಡಾ ಹಿಟ್ಟು ತುಂಬಾ ತೆಳುವಾಗಿದ್ದರೆ ಅದು ಕರಗುವಾಗ ಭಾರಿ ಪ್ರಮಾಣದ ಎಣ್ಣೆಯನ್ನು ಹೀರಿಕೊಳ್ಳುತ್ತದೆ. ಹಿಟ್ಟು ಯಾವಾಗಲೂ ಹದವಾಗಿ, ಸ್ವಲ್ಪ ಗಟ್ಟಿಯಾಗಿರಬೇಕು.

ಅಡುಗೆ ಸೋಡಾ ಅತಿಯಾಗದಿರಲಿ

 ಹಿಟ್ಟು ಉಬ್ಬಲಿ ಎಂದು ಅತಿಯಾಗಿ ಅಡುಗೆ ಸೋಡಾ ಬಳಸಬೇಡಿ. ಅಡುಗೆ ಸೋಡಾ ಹೆಚ್ಚಾದರೆ ತಿಂಡಿ ಮೃದುವಾಗುವುದೇನೋ ನಿಜ, ಆದರೆ ಅದು ಎಣ್ಣೆಯನ್ನು ಸ್ಪಂಜಿನಂತೆ ಹೀರಿಕೊಳ್ಳುವಂತೆ ಮಾಡುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !