October 5, 2026
Monday, October 5, 2026
spot_img

Tips | ಮನೆಯ ಅಂಗಳದ ಹಸಿರು ಪಾಚಿಯನ್ನು ಸುಲಭವಾಗಿ ಸಚ್ಛಗೊಳಿಸುವುದು ಹೇಗೆ?

ಮಳೆಗಾಲದಲ್ಲಿ ಅಥವಾ ತೇವಾಂಶವಿರುವ ಜಾಗಗಳಲ್ಲಿ ನೆಲದ ಮೇಲೆ ಹಸಿರು ಪಾಚಿ ಬೆಳೆಯುವುದು ಸಾಮಾನ್ಯ. ಇದು ಮನೆಯ ಅಂಗಳದ ಸೌಂದರ್ಯವನ್ನು ಹಾಳುಗೆಡವುವುದಲ್ಲದೆ, ಜಾರಿ ಬೀಳುವ ಅಪಾಯವನ್ನು ಹೆಚ್ಚಿಸುತ್ತದೆ. ಇದನ್ನು ತಡೆಯಲು ಇಲ್ಲಿದೆ ಸುಲಭ ಮಾರ್ಗ.

1. ಬಿಸಿ ನೀರು ಮತ್ತು ಉಪ್ಪಿನ ಬಳಕೆ

ಪಾಚಿ ಬೆಳೆದಿರುವ ಜಾಗಕ್ಕೆ ಕಾದ ಬಿಸಿ ನೀರನ್ನು ಹಾಕಿ, ಅದರ ಮೇಲೆ ದಪ್ಪ ಉಪ್ಪನ್ನು ಉದುರಿಸಿ. ಅರ್ಧ ಗಂಟೆಯ ನಂತರ ಗಟ್ಟಿ ಬ್ರಷ್‌ನಿಂದ ಉಜ್ಜಿದರೆ ಪಾಚಿ ಸುಲಭವಾಗಿ ಹೊರಬರುತ್ತದೆ.

2. ಅಡಿಗೆ ಸೋಡಾ ಮತ್ತು ವಿನೆಗರ್

ಅಡಿಗೆ ಸೋಡಾವನ್ನು ಪಾಚಿಯ ಮೇಲೆ ಎರಚಿ, ಅದರ ಮೇಲೆ ಬಿಳಿ ವಿನೆಗರ್ ಸಿಂಪಡಿಸಿ. ರಸಾಯನಿಕ ಪ್ರಕ್ರಿಯೆಯಿಂದಾಗಿ ಪಾಚಿಯ ಬೇರುಗಳು ಸಡಿಲಗೊಳ್ಳುತ್ತವೆ. 15 ನಿಮಿಷಗಳ ನಂತರ ನೀರಿನಿಂದ ತೊಳೆದರೆ ನೆಲ ಸಚ್ಛವಾಗುತ್ತದೆ.

3. ಬ್ಲೀಚಿಂಗ್ ಪೌಡರ್

ಅತಿಯಾದ ಪಾಚಿ ಇದ್ದರೆ, ಬ್ಲೀಚಿಂಗ್ ಪೌಡರ್ ಅನ್ನು ನೀರಿನಲ್ಲಿ ಬೆರೆಸಿ ಪಾಚಿ ಇರುವ ಜಾಗಕ್ಕೆ ಹಾಕಿ. ಸ್ವಲ್ಪ ಸಮಯ ಬಿಟ್ಟು ಉಜ್ಜಿ ತೊಳೆಯುವುದರಿಂದ ಪಾಚಿ ಸಂಪೂರ್ಣವಾಗಿ ನಾಶವಾಗುತ್ತದೆ ಹಾಗೂ ದುರ್ವಾಸನೆಯೂ ಕಡಿಮೆಯಾಗುತ್ತದೆ.

ನೆಲದ ಮೇಲೆ ಸದಾ ಸೂರ್ಯನ ಬೆಳಕು ಬೀಳುವಂತೆ ನೋಡಿಕೊಳ್ಳಿ ಮತ್ತು ನೀರು ನಿಲ್ಲದಂತೆ ಸೂಕ್ತ ಹರಿದುಹೋಗುವ ವ್ಯವಸ್ಥೆ ಮಾಡಿ. ನಿಯಮಿತವಾಗಿ ಸಚ್ಛಗೊಳಿಸುವುದರಿಂದ ಪಾಚಿ ಮತ್ತೆ ಬೆಳೆಯುವುದನ್ನು ಸುಲಭವಾಗಿ ತಡೆಯಬಹುದು.

Must Read