September 14, 2026
Monday, September 14, 2026
spot_img

TIPS | ಬಟ್ಟೆ ಮೇಲಿನ ಕಲೆಗಳನ್ನು ನೋಡಿ ಬೇಜಾರಾಗಿದೆಯೇ?: ಹಾಗಾದ್ರೆ ಇಂದೇ ಈ ಟ್ರಿಕ್ಸ್ ಟ್ರೈ ಮಾಡಿ

ನಮ್ಮ ಇಷ್ಟದ ಬೆಲೆಬಾಳುವ ಬಟ್ಟೆಗಳ ಮೇಲೆ ಟೀ, ಕಾಫಿ, ಎಣ್ಣೆ ಅಥವಾ ಮಸಾಲೆಯ ಕಲೆಗಳು ಬಿದ್ದರೆ ಇಡೀ ಬಟ್ಟೆಯೇ ಹಾಳಾಗುತ್ತದೆ. ಎಷ್ಟೇ ವಾಷಿಂಗ್ ಪೌಡರ್ ಬಳಸಿದರೂ ಈ ಕಲೆಗಳು ಸುಲಭವಾಗಿ ಹೋಗುವುದಿಲ್ಲ. ಆದರೆ, ನಿಮ್ಮ ಅಡುಗೆ ಮನೆಯಲ್ಲಿರುವ ಕೆಲವು ಸಾಮಾನ್ಯ ವಸ್ತುಗಳನ್ನು ಬಳಸಿ ಬಟ್ಟೆಯ ಕಲೆಗಳನ್ನು ತಕ್ಷಣವೇ ಮಾಯ ಮಾಡಬಹುದು.

ಅಡುಗೆ ಸೋಡಾ

ಊಟ ಮಾಡುವಾಗ ಬಟ್ಟೆಯ ಮೇಲೆ ಎಣ್ಣೆ ಅಥವಾ ಸಾರಿನ ಕಲೆ ಬಿದ್ದರೆ, ತಕ್ಷಣ ಆ ಜಾಗಕ್ಕೆ ಸ್ವಲ್ಪ ಅಡುಗೆ ಸೋಡಾವನ್ನು ಉದುರಿಸಿ. ಅಡುಗೆ ಸೋಡಾವು ಬಟ್ಟೆಯಲ್ಲಿರುವ ಎಣ್ಣೆಯಂಶವನ್ನು ಹೀರಿಕೊಳ್ಳುತ್ತದೆ. 15ನಿಮಿಷಗಳ ನಂತರ ಹಳೆಯ ಟೂತ್‌ಬ್ರಶ್‌ನಿಂದ ಲಘುವಾಗಿ ಉಜ್ಜಿ, ಉಗುರುಬೆಚ್ಚಗಿನ ನೀರಿನಲ್ಲಿ ತೊಳೆದರೆ ಕಲೆ ಮಾಯವಾಗುತ್ತದೆ.

ಬಿಳಿ ವಿನೆಗರ್

ಬಟ್ಟೆಯ ಮೇಲಿನ ಟೀ ಅಥವಾ ಕಾಫಿ ಕಲೆಗಳನ್ನು ತೆಗೆಯಲು ಬಿಳಿ ವಿನೆಗರ್ ಅದ್ಭುತವಾಗಿ ಕೆಲಸ ಮಾಡುತ್ತದೆ. ಒಂದು ಚಮಚ ವಿನೆಗರ್‌ಗೆ ಸ್ವಲ್ಪ ನೀರು ಸೇರಿಸಿ ಕಲೆ ಇರುವ ಜಾಗಕ್ಕೆ ಹಚ್ಚಿ 10 ನಿಮಿಷ ಬಿಡಿ. ನಂತರ ಡಿಟರ್ಜೆಂಟ್ ಸೋಪ್ ಬಳಸಿ ತೊಳೆದರೆ ಕಲೆ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ.

 ಡೆಟಾಲ್ ಅಥವಾ ಲಿಕ್ವಿಡ್ ಸೋಪ್:

ಬಟ್ಟೆಯ ಮೇಲೆ ಪೆನ್ನಿನ ಇಂಕ್ ಕಲೆಯಾಗಿದ್ದರೆ, ಆ ಜಾಗಕ್ಕೆ ಕೆಲ ಹನಿ ಡೆಟಾಲ್ (Dettol) ಅಥವಾ ಹ್ಯಾಂಡ್‌ವಾಶ್ ಲಿಕ್ವಿಡ್ ಹಾಕಿ ಲಘುವಾಗಿ ಉಜ್ಜಿ. ಇಂಕ್ ಕಲೆಗಳು ತಕ್ಷಣವೇ ಸಡಿಲಗೊಂಡು ಬಟ್ಟೆಯಿಂದ ದೂರಾಗುತ್ತವೆ.

ನಿಂಬೆಹಣ್ಣು ಮತ್ತು ಉಪ್ಪು:

ತುಕ್ಕು ಅಥವಾ ಹಳೆಯ ಕಲೆಗಳ ನಿವಾರಣೆಗೆ ಕಲೆ ಇರುವ ಜಾಗಕ್ಕೆ ನಿಂಬೆ ರಸ ಹಿಂಡಿ, ಅದರ ಮೇಲೆ ಸ್ವಲ್ಪ ಉಪ್ಪನ್ನು ಹಾಕಿ ಬಿಸಿಲಿನಲ್ಲಿ ಒಣಗಲು ಬಿಡಿ. ಕಲೆ ಸಂಪೂರ್ಣವಾಗಿ ಮಸುಕಾದ ನಂತರ ಸಾಮಾನ್ಯ ನೀರಿನಲ್ಲಿ ತೊಳೆದು ಒಣಗಿಸಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !