Saturday, December 9, 2023

Latest Posts

PARENTING | ಮಕ್ಕಳ ಹಠದಿಂದ ಹೈರಾಣಾಗಿದ್ದೀರಾ? ಮಕ್ಕಳು ಹೀಗಾಗೋಕೆ ನೀವೇ ಕಾರಣ!!

ಮೇಘನಾ ಶೆಟ್ಟಿ, ಶಿವಮೊಗ್ಗ

ಈಗಷ್ಟೇ ಹುಟ್ಟಿದ ಮಕ್ಕಳನ್ನು ಬೇಕಾದ್ರೆ ನೋಡ್ಕೋಬೋದು ಆದರೆ ಎರಡು ವರ್ಷದ ಮೇಲಿನ ತರಲೆ ಮಕ್ಕಳನ್ನು ನೋಡ್ಕೊಳೋದು ಕಷ್ಟಾ, ಕಷ್ಟ! ಹಸಿಮೆಣಸು ಕೈಯಲ್ಲಿ ಇಟ್ಕೋತಾರೆ, ಕಿತ್ಕೊಂಡ್ರೆ ಅಳ್ತಾರೆ, ಈಗಷ್ಟೇ ಮಡಚಿಟ್ಟ ಬಟ್ಟೆಯೆಲ್ಲಾ ಕಿತ್ತೆಸೆದು ಮನೆಯ ಮೂಲೆ ಮೂಲೆಗೂ ಹಾಕ್ತಾರೆ, ಟಿವಿ ಬೇಕು ಅಂತ ಹಠ, ಅಂಗಡಿಗೆ ಹೋದ್ರೆ ಗೊಂಬೆ ಬೇಕು ಅನ್ನೋ ಹಠ. ನಿಮ್ಮ ಕೂದಲು ಎಳೆಯೋ ಆಸೆ ಅವರದ್ದು, ನೀವು ನೋ ಅನ್ನೋದನ್ನೇ ಚಾಲೆಂಜಿಂಗ್ ಆಗಿ ತೆಗೆದುಕೊಂಡು ಮಾಡಿ ಮುಗಿಸುವ ಉತ್ಸಾಹ ಅವರಿಗೆ.. ಈ ಹಠಮಾರಿ ಮಕ್ಕಳನ್ನು ದಾರಿಗೆ ತರೋದು ಹೇಗೆ? ಮೊದಲು ನೀವು ದಾರಿಗೆ ಬನ್ನಿ!

ಚಾಯ್ಸ್ ಕೊಡಿ
ಯಾವಾಗಲೂ ಮಕ್ಕಳಿಗೆ ಚಾಯ್ಸ್ ಕೊಡಿ, ಎರಡು ಆಯ್ಕೆ ಅವರ ಮುಂದೆ ಇದ್ದಾಗ, ನಾನೇ ಆರಿಸಿದೆ ಅನ್ನೋ ಹೆಮ್ಮೆ ಅವರಿಗೆ ಆಗುತ್ತದೆ. ನಾನೇ ಬಟ್ಟೆ ಹಾಕೋತಿನಿ ಅಂತ ಹಠ ಮಾಡುವ ಮಕ್ಕಳಿಗೆ ವೀಕೆಂಡ್ ಅಥವಾ ನೀವು ಫ್ರೀ ಇದ್ದಾಗ ಅವರೇ ರೆಡಿಯಾಗೋಕೆ ಬಿಟ್ಟುಬಿಡಿ. ಬ್ಲಾಕ್ ಡ್ರೆಸ್ ಅಥವಾ ಪಿಂಕ್ ಡ್ರೆಸ್ ಹೀಗೆ ಎರಡು ಆಯ್ಕೆ ನೀಡಿ, ಎರಡಕ್ಕಿಂತ ಹೆಚ್ಚು ಆಯ್ಕೆ ಬೇಡ.

Why you should only give your child two choices | Loveveryಎಲ್ಲಾದಕ್ಕೂ ಬೇಡ, ಬೇಡ, ಅನ್ಬೇಡಿ
ಕೆಲವೊಮ್ಮೆ ಬೇಡ ಅನ್ನುವುದು ಅವಶ್ಯಕ ಆದರೆ ಎಲ್ಲಾ ವಿಷಯಕ್ಕೂ ಬೇಡ, ಮಾಡ್ಬೇಡ, ನೋ ಹೀಗೆ ಹೇಳ್ತಾ ಹೋದರೆ ಅವರಲ್ಲಿ ನೆಗೆಟಿವ್ ಬಿಹೇವಿಯರ್ ಆರಂಭವಾಗುತ್ತದೆ. ಓಡಬೇಡ ಅಂತ ಹೇಳೋ ಬದಲು, ಈಗ ನಡಿಯೋ ಸಮಯ ಅನ್ನೋದು ಬೆಸ್ಟ್ ಅಲ್ವಾ? ಅವರ ಸಣ್ಣ ಪುಟ್ಟ ಉತ್ತಮ ನಡೆಗಳಿಗೆ ಗುಡ್ ಹೇಳಿ ಪ್ರೋತ್ಸಾಹಿಸಿ.

It's Okay To Say No To Your Kidsಯಾವಾಗ ಹಠ ಮಾಡ್ತಾರೆ?
ಎಲ್ಲರಿಗೂ ಕೆಲವೊಂದು ಸಂದರ್ಭ ಅಥವಾ ವ್ಯಕ್ತಿಯಿಂದ ಹಠ ಮಾಡುವ ಅಥವಾ ಕೋಪ ಬರುವ ಸಂದರ್ಭ ಇರುತ್ತದೆ. ಅದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ಮೊಬೈಲ್ ಬೇಕು ಎಂದು ಮಕ್ಕಳು ಹಠ ಮಾಡಿದಾಗ, ಕಾರ್‌ನಲ್ಲಿ ಕುಳಿತು ಹೊರಡುವಾಗ ಮೊಬೈಲ್ ಕೊಡುತ್ತೇನೆ ಎಂದು ಹೇಳಿ. ಆದರೂ ಹಠ ಮಾಡಿದರೆ, ಈ ವಿಷಯದಲ್ಲಿ ಏನು ಮಾಡೋದಕ್ಕೆ ಆಗೋದಿಲ್ಲ, ಕಾರ್‌ಗೆ ಹೋಗುವ ವರೆಗೂ ಕಾಯಲೇಬೇಕು ಎಂದು ಹೇಳಿಬಿಡಿ.

Are You Dealing with a Stubborn Toddler? 5 Ways to End the Drama Now!ರಸ್ತೆಯಲ್ಲಿ ಕೆಳಗೆ ಕುಳಿತರೂ ಹಠಕ್ಕೆ ಮಣಿಯಬೇಡಿ
ಸಾರ್ವಜನಿಕ ಸ್ಥಳಗಳಲ್ಲಿ ನಮ್ಮ ಇಮೇಜ್ ಮೇಂಟೇನ್ ಮಾಡೋದು ಈಗೆಲ್ಲಾ ದೊಡ್ಡ ವಿಷಯ, ಮಕ್ಕಳು ಮಕ್ಕಳಾಗಿದ್ದರೆ, ಅವರ ಮಗು ನೋಡು ಕಪಿ ಥರ ಹಾರ‍್ತಾ ಇದ್ದಾನೆ ಎಂದು ಯಾರಾದರೂ ಹೇಳಿದ್ದು ಕಿವಿಗೆ ಬಿದ್ದರೆ ನನ್ನ ಮರ್ಯಾದಿ ಕಳೀಬೇಡ ಎಂದು ಮಗುವಿಗೆ ನಾಲ್ಕು ಏಟು ಬೀಳುತ್ತದೆ. ಅವರು ಹಠ ಮಾಡಿ ಸೀನ್ ಕ್ರಿಯೇಟ್ ಮಾಡ್ತಾ ಇದ್ದಾರೆ ಎನಿಸಿದ ತಕ್ಷಣ ಕೇಳಿದ್ದು, ಕೊಡುವುದು ಅಥವಾ ಕೊಡಿಸುವ ಅಭ್ಯಾಸ ಇಂದೇ ನಿಲ್ಲಿಸಿ. ಒಂದು ಬಾರಿ ಈ ಅಭ್ಯಾಸ ಆದರೆ, ಹಠ ಮಾಡಿದರೆ, ಕೂಗಾಡಿದರೆ ನನ್ನ ಮಾತಿಗೆ ಬೆಲೆ, ಕೇಳಿದ್ದೆಲ್ಲಾ ಸಿಗುತ್ತದೆ ಎಂದು ಅವರು ಕಲಿಯುತ್ತಾರೆ.

How to Discipline a 2-Year-Oldಈ ರೀತಿ ಮಾಡಿನೋಡಿ
ಮಕ್ಕಳಿಗೆ ಯಾವುದೇ ಆಟ ಆಡುವಾಗ ಅದರಲ್ಲಿ ಮುಳುಗಿ ಹೋಗುವ ಅಭ್ಯಾಸ, ಊಟ ತಿಂಡಿ ಬೇಕಾಗಿಲ್ಲ, ನೆಚ್ಚಿನ ಆಟ ಆಡುವ ಮಧ್ಯ ಊಟಕ್ಕೆ ಬಾ ಎಂದರೆ ಬರೋದಿಲ್ಲ, ನೀವು ಫೋರ್ಸ್ ಮಾಡಿ ಎಳೆದುಕೊಂಡು ಹೋದರೆ ಊಟ ಚೆಲ್ಲೋದು, ತಿನ್ನದೇ ಡ್ರಾಮಾ ಮಾಡುವ ಸಾಧ್ಯತೆ ಇದೆ. ಮಕ್ಕಳಿಗೆ ಊಟದ ಸಮಯ ಫಿಕ್ಸ್ ಮಾಡಿ, ಅಭ್ಯಾಸ ಮಾಡಿಸಿ, ಆಟ ಆಡುವ ಮಕ್ಕಳಿಗೆ ಇನ್ನೈದು ನಿಮಿಷದ ನಂತರ ನೀನು ಊಟಕ್ಕೆ ಬರಬೇಕು ಎಂದು ಹೇಳಿ.

What Toddler Social Development Looks Like: Ages 1 and 4ನೋ ಅನ್ನಬೇಡಿ, ಟೈಮ್ ಕೇಳಿ
ಸಂಜೆ ನಾನು ಫ್ರೆಂಡ್ ಮನೆಗೆ ಹೋಗ್ಲಾ? ಈ ರೀತಿ ಮಕ್ಕಳು ಸಡನ್ ಆಗಿ ಕೇಳಿದಾಗ ನಿಮಗೆ ಏನು ಮಾಡಬೇಕು ಎಂದು ತಿಳಿಯದಿದ್ದರೆ ಒಕೆ, ತಡಿ ಈ ಬಗ್ಗೆ ಯೋಚನೆ ಮಾಡಿ ಹೇಳ್ತೇನೆ ಎಂದು ಹೇಳಿ. ತಕ್ಷಣವೇ ಇಲ್ಲ ಕಳಿಸೋದಿಲ್ಲ ಎನ್ನಬೇಡಿ. ನಂತ ಕಳಿಸೋದಿಲ್ಲ ಎಂದು ಹೇಳಿ, ಜೊತೆಗೆ ಸಾರಿ ಕೇಳಿ, ಯಾಕೆ ಕಳಿಸೋದಿಲ್ಲ ಉತ್ತರ ನೀಡಿ.

Good Parents: Characteristics of Good Parentingಮಕ್ಕಳು ನಿಮ್ಮಂತೆಯೇ, ನೀವು ಮಾಡಿದ್ದನ್ನೇ ಅವರೂ ಮಾಡ್ತಾರೆ, ನೀವು ಮಕ್ಕಳಾಗಿದ್ದಾಗ ಸಾಕಷ್ಟು ಹಠ ಮಾಡಿದ್ದೀರಿ, ನಿಮ್ಮ ಪೋಷಕರು ತಾಳ್ಮೆಯಿಂದ ಬೆಳೆಸಿದ್ದಾರೆ. ಅವರನ್ನು ಬೆಳೆಸುವಾಗಲೂ ತಾಳ್ಮೆಯಿಂದಿರಿ, ಬಾಲ್ಯ ಅನ್ನೋದು ಬಹಳ ಮುಖ್ಯ, ಮುಂದೆ ಅವರು ಎಂಥ ವ್ಯಕ್ತಿ ಆಗುತ್ತಾರೆ ಅನ್ನೋದಕ್ಕೆ ಇದು ಮುಖ್ಯವಾದ ಅಡಿಪಾಯ!

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!