ವಿಪ್ರೋ, ನೆಸ್ಲೆ ಕಂಪನಿಗಿಂತಲೂ ಶ್ರೀಮಂತವಾಗಿದೆ ತಿರುಪತಿ ದೇವಾಲಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಸುಪ್ರಸಿದ್ಧ ದೇವಾಲಯ ತಿರುಪತಿಯ ವೆಂಕಟೇಶ್ವರ ದೇವಾಲಯ ತನ್ನ ನಿವ್ವಳ ಮೌಲ್ಯವನ್ನು ಘೋಷಿಸಿದೆ. ಮೌಲ್ಯವು ಐಟಿ ಕಂಪನಿಯಾದ ವಿಪ್ರೋ, ಆಹಾರ ತಯಾರಕ ಕಂಪನಿಯಾದ ನೆಸ್ಲೆ, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಯಾದ ಓಎನ್‌ಜಿಸಿ ಮತ್ತು ಐಒಸಿಗಿಂತಲೂ ಹೆಚ್ಚಿದೆ.

ತಿರುಪತಿ ತಿಮ್ಮಪ್ಪನ ದೇವಾಲಯದ ನಿವ್ವಳ ಮೌಲ್ಯ 2.5 ಲಕ್ಷ ಕೋಟಿ ರೂ. ಎಂದು ಘೋಷಿಸಲಾಗಿದೆ. ಮೊದಲ ಬಾರಿಗೆ ತಿರುಪತಿ ದೇವಾಲಯ ತನ್ನ ನಿವ್ವಳ ಮೌಲ್ಯವನ್ನು ಘೋಷಿಸಿದೆ. ಬ್ಯಾಂಕ್‌ನಲ್ಲಿ 10.25 ಟನ್ ಚಿನ್ನದ ಠೇವಣಿ, 2.5ಟನ್ ಚಿನ್ನಾಭರಣ, 16,000 ಕೋಟಿ ರೂ. ಠೇವಣಿ ಹಾಗೂ 960 ಆಸ್ತಿಗಳು ಇದೆ ಎಂದು ಘೋಷಿಸಲಾಗಿದೆ. ಎಲ್ಲವೂ ಸೇರಿ ಒಟ್ಟಾರೆ 2.5 ಲಕ್ಷ ಕೋಟಿ ರೂ.ಗಿಂತಲೂ ಹೆಚ್ಚಿನ ಮೌಲ್ಯವಾಗಿದೆ. ಇಷ್ಟು ಆಸ್ತಿ ಬಹುತೇಕ ದೊಡ್ಡ ಕಂಪನಿಗಳ ಬಂಡವಾಳಕ್ಕಿಂತಲೂ ಹೆಚ್ಚಿದೆ.

ವಿಪ್ರೋ 2.14 ಲಕ್ಷ ಕೋಟಿ ರೂ, ನೆಸ್ಲೆ 1.96 ಲಕ್ಷ ಕೋಟಿ ರೂ. ಮಾರುಕಟ್ಟೆ ಮೌಲ್ಯ ಹೊಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!